ADVERTISEMENT

ಕೊರೊನಾ ಭೀತಿ: ಮಣಿಪುರದ 185 ನರ್ಸ್‌ಗಳು ರಾಜೀನಾಮೆ

ಪಿಟಿಐ
Published 16 ಮೇ 2020, 15:51 IST
Last Updated 16 ಮೇ 2020, 15:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲ್ಕತ್ತ: ನಗರದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಲ್ಲಿಯ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಮಣಿಪುರ ಮೂಲದ 185 ನರ್ಸ್‌ಗಳುಕೆಲಸಕ್ಕೆ ರಾಜೀನಾಮೆ ನೀಡಿ,ತಮ್ಮ ರಾಜ್ಯಕ್ಕೆ ಹಿಂದಿರುಗಿದ್ದಾರೆ.

ಕೊರೊನಾ ಬಿಕ್ಕಟ್ಟಿನ ನಡುವೆಯೇ ನರ್ಸ್‌ಗಳುರಾಜೀನಾಮೆ ನೀಡುತ್ತಿರುವುದು, ವೈದ್ಯಕೀಯ ಸೇವೆಗೆ ತೊಂದರೆ ಉಂಟಾಗುವ ಭೀತಿ ಎದುರಾಗಿದೆ.

‘ಪಶ್ಚಿಮ ಬಂಗಾಳದಲ್ಲಿ ನರ್ಸಿಂಗ್‌ ಕಾಲೇಜುಗಳ ಸಂಖ್ಯೆ ತೀರ ಕಡಿಮೆ ಇರುವುದರಿಂದ ನರ್ಸ್‌ಗಳಕೊರತೆ ಮೊದಲಿನಿಂದಲೂ ಇದೆ. ನಾವು ಕೇರಳ,ಈಶಾನ್ಯ ರಾಜ್ಯಗಳ ದಾದಿಯರ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ’ ಎಂದು ಎಎಂಆಐ ಆಸ್ಪತ್ರೆಯ ಸಿಇಒ ರೂಪಕ್ ಬರುವಾ ತಿಳಿಸಿದರು.

ADVERTISEMENT

‘ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವುದರಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ನಾವು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ, ಊರಿಗೆ ಹೋಗಲು ನಿರ್ಧರಿಸಿದ್ದೇವೆ. ಬದುಕಿದ್ದರೆ ಇನ್ನೊಂದು ಕೆಲಸ ಪಡೆಯಬಹುದು’ ಎಂದು ನರ್ಸ್‌ವೊಬ್ಬರುಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಈವರೆಗೆ ಒಟ್ಟು 1,407 ಸೋಂಕಿತರಿದ್ದು, 153 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.