ADVERTISEMENT

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯ ಸ್ಥಿರ: ಏಮ್ಸ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 9:24 IST
Last Updated 15 ಅಕ್ಟೋಬರ್ 2021, 9:24 IST
ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌
ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌   

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ದೆಹಲಿಯ ಏಮ್ಸ್‌ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

89 ವರ್ಷದ ಮನಮೋಹನ್ ಸಿಂಗ್ ಸೋಮವಾರದಿಂದ ಜ್ವರದಿಂದ ಬಳಲಿದ್ದರು. ಬಳಿಕ ಚೇತರಿಸಿಕೊಂಡರೂ ನಿಶಕ್ತಿ ಕಾಡಿತ್ತು. ಇದರಿಂದಾಗಿ ಅವರನ್ನುಏಮ್ಸ್‌ನ ಕಾರ್ಡಿಯೊ ನ್ಯೂರೊ ಘಟಕದ ಖಾಸಗಿ ವಾರ್ಡ್‌ನಲ್ಲಿ ದಾಖಲಿಸಲಾಗಿದೆ.

ಡಾ. ನಿತೀಶ್ ನಾಯಕ್ ನೇತೃತ್ವದ ಹೃದ್ರೋಗ ತಜ್ಞರ ತಂಡವು ಸಿಂಗ್‌ ಅವರ ಆರೋಗ್ಯದ ಮೇಲೆ ನಿಗಾ ವಹಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.