ADVERTISEMENT

ಮನದ ಮಾತು: ಮನ್​ ಕೀ ಬಾತ್​ ಈಶ್ವರಿ ರೂಪವಾದ ಜನರ ಪೂಜೆ– ಮೋದಿ

ಪ್ರಜಾವಾಣಿ ವಿಶೇಷ
Published 30 ಏಪ್ರಿಲ್ 2023, 9:35 IST
Last Updated 30 ಏಪ್ರಿಲ್ 2023, 9:35 IST
ಮನದ ಮಾತು ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ
ಮನದ ಮಾತು ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ    ಟ್ವಿಟರ್ ಚಿತ್ರ

ಮನ್‌ ಕಿ ಬಾತ್‌ ಮಾಸಿಕ ರೇಡಿಯೊ ಕಾರ್ಯಕ್ರಮ...

ಪ್ರಧಾನಿ ನರೇಂದ್ರ ಮೋದಿ ಅವರ ಮನದ ಮಾತು (ಮನ್‌ ಕಿ ಬಾತ್‌) ಮಾಸಿಕ ರೇಡಿಯೊ ಕಾರ್ಯಕ್ರಮದ 100ನೇ ಸಂಚಿಕೆಯ ಪ್ರಸಾರವಾಗುತ್ತಿದೆ.

ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಈ ಕಾರ್ಯಕ್ರಮ ನೇರ ಪ್ರಸಾರವಾಗುತ್ತಿರುವುದು ವಿಶೇಷ.

ಮನ್​ ಕೀ ಬಾತ್​ ನನಗೆ ಒಂದು ಕ್ರಾರ್ಯಕ್ರಮವಲ್ಲ, ಇದು ನನಗೆ ಈಶ್ವರಿ ಸ್ವರೂಪವಾದ ಜನರ ಪೂಜೆಯಾಗಿದೆ. 

ಈ ದಿನ ನಾವು ನೂರನೇ ಕಾರ್ಯಕ್ರಮ ತಲುಪಿದ್ದೇವೆ. ಈ ಕಾರ್ಯಕ್ರಮದಲ್ಲಿ ನಾನು ಮಾತನಾಡುವಾಗ ಸಾಕಷ್ಟು ಬಾರಿ ಬಾವುಕನಾಗಿದ್ದೇನೆ. ಸಮಾಜದ ಅನೇಕ ನಿಜವಾದ ರಿಯಲ್ ನಾಯಕರನ್ನು ನೆನೆಯಲು ಮನ್​​ ಕೀ ಬಾತ್​​ ಒಂದು ಉತ್ತಮ ಕಾರ್ಯಕ್ರಮವಾಗಿದೆ.

ಮನ್​ ಕೀ ಬಾತ್​ ಮೂಲಕ ‘ಬೇಟಿ ಬಚಾವೊ ಬೇಟಿ ಪಡಾವೊ‘ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲಾಯಿತು. ಇದರಿಂದ ನಮ್ಮ ನಾರಿಯರ ಶಕ್ತಿ ಅನಾವರಣವಾಯಿತು. 

‘ಬೇಟಿ ಬಚಾವೊ ಬೇಟಿ ಪಡಾವೊ‘ ಅಭಿಯಾನದಲ್ಲಿ ಹರಿಯಾಣದ ಸುನಿಲ್​ ಅವರ "ಸೆಲ್ಫಿ ವಿತ್​​​ ಬೇಟಿ" ಅಭಿಯಾನಕ್ಕೆ ದೇಶದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಯಿತು.

ಆತ್ಮನಿರ್ಭರ​ ಯೋಜನೆ ಕುರಿತು ದೇಶದ ಯುವಕರಿಗೆ ಮಾಹಿತಿ ನೀಡಲಾಯಿತು. ಶಿಕ್ಷಣ, ವೈದ್ಯಕೀಯ ಸೌಲಭ್ಯ, ಜಲ ಸಂರಕ್ಷಣೆ, ಸರ್ಕಾರಿ ಯೋಜನೆಗಳ ಬಗ್ಗೆ ಇಲ್ಲಿ ವಿಚಾರ ಮಾಡಲಾಯಿತು.

ಉದ್ಯಮಿಗಳಿಗೆ ಉತ್ತೇಜನ ನೀಡಲಾಯಿತು. ಗೊಂಬೆಗಳ ತಯಾರಿಕೆ ಮತ್ತು ಆತ್ಮ ನಿರ್ಭರ ಭಾರತಕ್ಕೆ ಸಾಕಷ್ಟು ಪ್ರಚಾರ ದೊರೆಯಿತು. ಸ್ವಚ್ಛ ಭಾರತಕ್ಕೆ ಈ ಕಾರ್ಯಕ್ರಮ ಹೊಸ ಮೈಲಿಗಲ್ಲು.

ಮನ್​ ಕೀ​ ಬಾತ್​​ ಕಾರ್ಯಕ್ರಮ ಸಮಾಜಕ್ಕೆ ಪ್ರೇರಣೆಯಾಗಿದೆ. ವೋಕಲ್ ಫಾರ್ ಲೋಕಲ್ ಮತ್ತಷ್ಟು ಗಟ್ಟಿಯಾಗಿದೆ.

ಯುನೆಸ್ಕೋ ಡಿಜಿ ಮನ್​​ ಕೀ ಬಾತ್​ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಭಾರತದ ಶಿಕ್ಷಣ ಮತ್ತು ಸಂಸ್ಕೃತಿ ಬಗ್ಗೆ ಅವರು ಮಾತನಾಡಿದ್ದಾರೆ.

ಜಿ20ಗೆ ಅಧ್ಯಕ್ಷತೆವಹಿಸಿರುವ ಈ ಸಂದರ್ಭದಲ್ಲಿ ಎಲ್ಲರು ಒಟ್ಟಾಗಿ ದೇಶದ ಅಭಿವೃದ್ದಿಯತ್ತ ಸಾಗೋಣ ಮತ್ತು ನವಭಾರತ ನಿರ್ಮಾಣ ಮಾಡೋಣ ಎಂದು ದೇಶದ ಜನತೆಗೆ ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.