ADVERTISEMENT

ಮುಂಗಾರು ಪ್ರವೇಶ ಇನ್ನಷ್ಟು ವಿಳಂಬ

ವಾಡಿಕೆಯಂತೆ ಜೂ.1ಕ್ಕೆ ಪ್ರವೇಶವಾಗಬೇಕು

​ಪ್ರಜಾವಾಣಿ ವಾರ್ತೆ
Published 15 ಮೇ 2019, 18:59 IST
Last Updated 15 ಮೇ 2019, 18:59 IST
   

ನವದೆಹಲಿ:ಪ್ರಸಕ್ತ ವರ್ಷ ದಲ್ಲಿನೈರುತ್ಯ ಮುಂಗಾರು ಮಾರುತದ ಪ್ರವೇಶ ವಿಳಂಬವಾಗಲಿದ್ದು, ಕೇರಳಕ್ಕೆ ಜೂನ್ 6 ರಂದು ಮುಂಗಾರು ಪ್ರವೇಶಿಸಲಿದೆ ಎಂದುಭಾರತೀಯ ಹವಾಮಾನ ಇಲಾಖೆ(ಐಎಂಡಿ)ಮುನ್ಸೂಚನೆ ನೀಡಿದೆ.

ವಾಡಿಕೆಯಂತೆ ಜೂನ್ 1ಕ್ಕೆ ಮುಂಗಾರು ಕೇರಳ ಪ್ರವೇಶಿಸಿ ಮುಂದುವರಿಯಬೇಕು. ಈ ವರ್ಷ ಜೂನ್ 6ಕ್ಕೆ ಮುಂಗಾರು ಪ್ರವೇಶಿಸುವ ಮುನ್ಸೂಚನೆಯನ್ನು ಐಎಂಡಿ ನೀಡಿದ್ದು, ಈ ದಿನಕ್ಕಿಂತನಾಲ್ಕು ದಿನ ಮುಂಚಿತವಾಗಿ ಅಥವಾ ತಡವಾಗಿ ಮಾರುತಗಳ ಪ್ರವೇಶವಾಗಬಹುದುಎಂದು ಇಲಾಖೆ ತಿಳಿಸಿದೆ. ನೈರುತ್ಯ ಮುಂಗಾರು ಮಾರುತವು ಮೇ 18–19ರಂದು ಅಂಡಮಾನ್‌ ಸಮುದ್ರ ಮತ್ತು ನಿಕೋಬಾರ್ ದ್ವೀಪಗಳನ್ನು ದಾಟಿ ಮುಂದುವರಿಯಲು ಪೂರಕ ವಾತಾವರಣ ಸೃಷ್ಟಿಯಾಗಿದೆ ಎಂದು ಐಎಂಡಿ ತಿಳಿಸಿದೆ.

ಮಂಗಳವಾರ ಹವಾಮಾನ ವಿಶ್ಲೇಷಣಾ ಖಾಸಗಿ ಸಂಸ್ಥೆ ಸ್ಕೈಮೆಟ್ ಜೂನ್ 4ರಂದು ಮುಂಗಾರು ಮಾರುತ ಕೇರಳ ಕರಾವಳಿ ಪ್ರವೇಶಿಸಲಿವೆ ಎಂದು ಮುನ್ಸೂಚನೆ ನೀಡಿತ್ತು.

ADVERTISEMENT

ಮಳೆ ಮಾಹಿತಿ...

2014ರಿಂದ ಸತತ 3 ವರ್ಷ ಮುಂಗಾರು ಪ್ರವೇಶ ವಿಳಂಬವಾಗಿತ್ತು. 2014ರಲ್ಲಿ ಜೂನ್ 5ಕ್ಕೆ, 2015ರಲ್ಲಿ ಜೂನ್ 6ಕ್ಕೆ ಹಾಗೂ 2016ರಲ್ಲಿ ಜೂನ್ 8ಕ್ಕೆ ಮುಂಗಾರು ಮಾರುತವು ಕೇರಳ ಪ್ರವೇಶಿಸಿತ್ತು. ಮುಂಗಾರು ಪ್ರವೇಶ ವಿಳಂಬದಿಂದ ಮಳೆ ಕೊರತೆ ಆಗಲಿದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. 2017ರಲ್ಲಿ ಮೇ 30ರಂದು ಹಾಗೂ 2018ರಲ್ಲಿ ಮೇ 29ರಂದೇ ಕೇರಳಕ್ಕೆ ಮುಂಗಾರು ಪ್ರವೇಶಿಸಿತ್ತು. ಹೀಗಿದ್ದರೂ, ಆ ಎರಡು ವರ್ಷವೂ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.