ADVERTISEMENT

ಪ್ರವಾಸಿಗರಿದ್ದ ದೋಣಿಗೆ ನೌಕಾಪಡೆ ನೌಕಾಪಡೆಯ ಗಸ್ತು ಬೋಟ್‌ ಡಿಕ್ಕಿ: 13 ಸಾವು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2024, 21:40 IST
Last Updated 18 ಡಿಸೆಂಬರ್ 2024, 21:40 IST
<div class="paragraphs"><p>ಮುಂಬೈ ಕರಾವಳಿಯಲ್ಲಿ ಬುಧವಾರ ನೌಕಾಪಡೆಯ ದೋಣಿಯೊಂದು ಪ್ರವಾಸಿಗರಿದ್ದ ಮತ್ತೊಂದು ದೋಣಿಗೆ ಡಿಕ್ಕಿ ಹೊಡೆದ ನಂತರ ಕಂಡು ಬಂದ ದೃಶ್ಯ&nbsp;</p></div>

ಮುಂಬೈ ಕರಾವಳಿಯಲ್ಲಿ ಬುಧವಾರ ನೌಕಾಪಡೆಯ ದೋಣಿಯೊಂದು ಪ್ರವಾಸಿಗರಿದ್ದ ಮತ್ತೊಂದು ದೋಣಿಗೆ ಡಿಕ್ಕಿ ಹೊಡೆದ ನಂತರ ಕಂಡು ಬಂದ ದೃಶ್ಯ 

   

–ಪಿಟಿಐ ಚಿತ್ರ

ಮುಂಬೈ: ಮುಂಬೈ ಕರಾವಳಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ನೌಕಾಪಡೆಯ ಗಸ್ತು ದೋಣಿಯೊಂದು ಪ್ರವಾಸಿಗರಿದ್ದ ಮತ್ತೊಂದು ದೋಣಿಗೆ ಬುಧವಾರ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಮೃತಪಟ್ಟಿದ್ದಾರೆ. 101 ಜನರನ್ನು ರಕ್ಷಿಸಲಾಗಿದೆ.

ADVERTISEMENT

ನಾಗ್ಪುರದಲ್ಲಿ ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ‘ಗಸ್ತು ದೋಣಿ ಡಿಕ್ಕಿ ಹೊಡೆದ ನಂತರ, ಪ್ರವಾಸಿಗರಿದ್ದ ದೋಣಿಯು ಮಗುಚಿ ಈ ಅವಘಡ ಸಂಭವಿಸಿದೆ. ಮೃತರಲ್ಲಿ ಮೂವರು ನೌಕಾಪಡೆ ಸಿಬ್ಬಂದಿ ಇದ್ದಾರೆ’ ಎಂದು ಹೇಳಿದ್ದಾರೆ.

‘ನೀಲಕಮಲ್‌‘ ದೋಣಿಯು, ಗೇಟ್‌ ವೇ ಆಫ್‌ ಇಂಡಿಯಾದಿಂದ ಪ್ರಸಿದ್ಧ ಪ್ರವಾಸಿ ತಾಣ ಎಲಿಫಂಟಾ ಗುಹೆಗಳತ್ತ ಸಾಗುತ್ತಿದ್ದಾಗ, ಸಂಜೆ 4ರ ಹೊತ್ತಿಗೆ ಈ ಅವಘಡ ಸಂಭವಿಸಿದೆ’ ಎಂದು ಫಡಣವೀಸ್‌ ತಿಳಿಸಿದರು. ‘ದೋಣಿಯಲ್ಲಿ 110ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ಐವರು ಸಿಬ್ಭಂದಿ ಇದ್ದರು’ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. 

ನೌಕಾಪಡೆಯ 11 ದೋಣಿಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

ಪರಿಹಾರ ಘೋಷಣೆ
ಮೃತರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹50 ಸಾವಿರ ಪರಿಹಾರವನ್ನು ಘೋಷಿಸಿದ್ದಾರೆ.

ಮುಂಬೈ ಕರಾವಳಿಯಲ್ಲಿ ಬುಧವಾರ ನೌಕಾಪಡೆಯ ದೋಣಿಯೊಂದು ಪ್ರವಾಸಿಗರಿದ್ದ ಮತ್ತೊಂದು ದೋಣಿಗೆ ಡಿಕ್ಕಿ ಹೊಡೆದಿದ್ದು ಪ್ರಯಾಣಿಕರ ರಕ್ಷಣಾ ಕಾರ್ಯ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.