ADVERTISEMENT

ದಕ್ಷಿಣ ಕಾಶ್ಮೀರ: 3 ದಿನದಲ್ಲಿ 6 ಭಯೋತ್ಪಾದಕರ ಹತ್ಯೆ

ಪಿಟಿಐ
Published 16 ಮೇ 2025, 12:50 IST
Last Updated 16 ಮೇ 2025, 12:50 IST
   

ಅವಂತಿಪುರ: ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಬಳಿಕ ದಕ್ಷಿಣ ಕಾಶ್ಮೀರದ ವಿವಿಧೆಡೆ ಉಗ್ರರ ನಿಗ್ರಹ ಕಾರ್ಯಾಚರಣೆ ತೀವ್ರಗೊಳಿಸಿರುವ ಸೇನಾ ಪಡೆಗಳು, ಮೂರು ದಿನಗಳಲ್ಲಿ 6 ಮಂದಿ ಭಯೋತ್ಪಾದಕರನ್ನು ಹತ್ಯೆ ಮಾಡಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿದ ಕಾಶ್ಮೀರದ ಐಜಿಪಿ ವಿ.ಕೆ. ಬಿರ್ದಿ, ‘ಕಳೆದೊಂದು ತಿಂಗಳಿನಿಂದ ಭಯೋತ್ಪಾದಕರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಅಲ್ಲದೆ, ಪರಿಸ್ಥಿತಿಗೆ ಅನುಗುಣವಾಗಿ ಭದ್ರತಾ ತಂಡಗಳ ಕಾರ್ಯ ತಂತ್ರಗಳಲ್ಲಿ ಬದಲಾವಣೆ ಮಾಡಲಾಗಿದೆ’ ಎಂದರು. 

ಭದ್ರತಾ ಪಡೆಗಳ ನಡುವಿನ ಸಹಕಾರದಿಂದಾಗಿ ಮೂರು ದಿನಗಳಲ್ಲಿ ನಡೆದ ಎರಡು ಯಶಸ್ವಿ ಕಾರ್ಯಾಚರಣೆಯಲ್ಲಿ ಆರು ಮಂದಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಇದು ಮಹತ್ವದ ಸಾಧನೆ ಎಂದು ತಿಳಿಸಿದರು. 

ADVERTISEMENT

ಮಂಗಳವಾರ ಮತ್ತು ಗುರುವಾರ ಶೋಪಿಯಾನ್‌ನ ಕೆಲ್ಲೆರ್ ಮತ್ತು ಪುಲ್ವಾಮದ ಟ್ರಾಲ್‌ನ ನಾಡರ್ ಪ್ರದೇಶದಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ತಲಾ ಮೂವರು ಭಯೋತ್ಪಾದಕರು ಹತ್ಯೆಗೀಡಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.