ADVERTISEMENT

ಮರಾಠಿ ಕಾದಂಬರಿಕಾರ ಗುರುನಾಥ್ ನಾಯ್ಕ್ ನಿಧನ

ಪಿಟಿಐ
Published 4 ನವೆಂಬರ್ 2021, 6:05 IST
Last Updated 4 ನವೆಂಬರ್ 2021, 6:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪುಣೆ: ಮರಾಠಿಯ ಪ್ರಸಿದ್ಧ ಪತ್ತೇದಾರಿ ಕಾದಂಬರಿಕಾರ ಗುರುನಾಥ್ ನಾಯ್ಕ್ (84) ಇಲ್ಲಿನ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.

ಗೋವಾ ಮೂಲದ ಗುರುನಾಥ್ ನಾಯ್ಕ್ ಅವರು ಪುಣೆಯಲ್ಲಿ ನೆಲೆಸಿದ್ದರು. ಅವರು 1,200ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. 16 ವರ್ಷಗಳ ಹಿಂದೆ ಪಾರ್ಶ್ವವಾಯು ಪೀಡಿತರಾದ ನಂತರ ಅವರು ಬರವಣಿಗೆಯನ್ನು ನಿಲ್ಲಿಸಿದ್ದರು.

1970 ರಿಂದ 1982ರ ಅವಧಿಯಲ್ಲಿ ಅವರು 700ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು. ಅವರ ಕೃತಿಗಳಲ್ಲಿನ ಕಾಲ್ಪನಿಕ ಪಾತ್ರಗಳು ಕೂಡ ಅಷ್ಟೇ ಜನಪ್ರಿಯ. ‘ಜಹರಿ ಪೇ’, ‘ಕ್ಯಾಬರೇ ಡಾನ್ಸರ್‌’, ‘ಮಹಾಮಾನವ’, ‘ರಕ್ತಾಚ ಪಾಸ್‌’ ಅವರ ಜನಪ್ರಿಯ ಕೃತಿಗಳಾಗಿವೆ.

ADVERTISEMENT

ಅವರು ಆಕಾಶವಾಣಿಗಾಗಿ ಹಲವಾರು ಕಥೆಗಳ ವಾಚನ ಮಾಡಿದ್ದರು. ಮರಾಠಿ ದೈನಿಕವೊಂದರ ಸಂಪಾದಕರಾಗಿಯೂ ಅವರು ಲಾತೂರ್‌ನಲ್ಲಿ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.