ADVERTISEMENT

ಮಾತೃತ್ವ ರಜೆಯು ಮಹಿಳೆಯ ಹಕ್ಕು: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 19:45 IST
Last Updated 17 ಆಗಸ್ಟ್ 2022, 19:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಮಾತೃತ್ವ ರಜೆ ಮಹಿಳೆಯ ಹಕ್ಕು.ಸ್ವಾಭಾವಿಕ ಹೆರಿಗೆಯಿಂದ ಪಡೆಯದ ಮಗವಿನಪಾಲನೆಗೆ ರಜೆ ತೆಗೆದುಕೊಂಡಿದ್ದರೂಮಾತೃತ್ವ ರಜೆಯ ಹಕ್ಕನ್ನು ಕಸಿದುಕೊಳ್ಳುವಂತಿಲ್ಲಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಮತ್ತು ಎ.ಎಸ್‌. ಬೋಪಣ್ಣ ಅವರ ನೇತೃತ್ವದ ಪೀಠವು,ಕೇಂದ್ರ ನಾಗರಿಕ ಸೇವೆಗಳ ನಿಯಮಗಳು (ಸಿಸಿಎಸ್ ನಿಯಮಗಳು) ಅಡಿಯಲ್ಲಿ ಮಹಿಳೆಗೆ ಶಿಶು ಆರೈಕೆ ರಜೆ ಹಕ್ಕು ಮೊಟಕುಗೊಳಿಸುವಂತಿಲ್ಲ. ಹೆರಿಗೆ ರಜೆಗೆ ಸಂಬಂಧಿಸಿದ ಸಿಸಿಸಿಎಸ್ ನಿಯಮಗಳ ನಿಬಂಧನೆಗಳನ್ನು ಹೆರಿಗೆ ಸೌಲಭ್ಯ ಕಾಯ್ದೆಯ ಆಶಯಕ್ಕೆ ಅನುಗುಣವಾಗಿ ಪರಿಗಣಿಸಬೇಕು ಎಂದು ಹೇಳಿದೆ.

ಚಂಡೀಗಡದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸ್ನಾತಕೋತ್ತರ ಸಂಸ್ಥೆಯಲ್ಲಿ ನರ್ಸ್‌ವೊಬ್ಬರಿಗೆ ಸಿಎಸ್‌ಸಿ ಕಾಯಿದೆ 2013ರ ಅಡಿ ಕೋರಿದ್ದ ಹೆರಿಗೆ ರಜೆ ಸೌಲಭ್ಯ ನಿರಾಕರಿಸಲಾಗಿತ್ತು.ಮೊದಲ ಮದುವೆಯಲ್ಲಿಜೈವಿಕ ತಂದೆಯಿಂದ ಜನಿಸಿದ ಇಬ್ಬರು ಮಕ್ಕಳಿಗೆ ಈ ರೀತಿಯ ರಜೆ ಸೌಲಭ್ಯ ಪಡೆದಿದ್ದಾರೆ ಎಂಬ ಕಾರಣಕ್ಕಾಗಿ, ಆಕೆಯ ಎರಡನೇ ಮದುವೆಯಿಂದ ಜನಿಸಿದ ಮಗುವಿನ ಆರೈಕೆ ರಜೆ ನಿರಾಕರಿಸಿತ್ತು. ಇದನ್ನು ಕೇಂದ್ರೀಯ ಆಡಳಿತ ನ್ಯಾಯಮಂಡಳಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಎತ್ತಿ ಹಿಡಿದಿದ್ದವು.

ADVERTISEMENT

ಈ ಆದೇಶ ಪ್ರಶ್ನಿಸಿ ಅರ್ಜಿದಾರ ಮಹಿಳೆ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ವಕೀಲ ಅಕ್ಷಯ್‌ ವರ್ಮಾ ಮಹಿಳೆ ಪರ ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.