ಪತ್ನಿ ವೀಣಾ ಅವರರೊಂದಿಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮಾರಿಷಸ್ ಪ್ರಧಾನಿ ನವೀನ್‌ಚಂದ್ರ ರಾಮಗುಲಾಂ
(ಪಿಟಿಐ ಚಿತ್ರ)
ವಾರಾಣಸಿ (ಉತ್ತರ ಪ್ರದೇಶ): ಮಾರಿಷಸ್ ಪ್ರಧಾನಿ ನವೀನ್‌ಚಂದ್ರ ರಾಮಗುಲಾಂ ಅವರು ತಮ್ಮ ಪತ್ನಿಯೊಂದಿಗೆ ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಇಂದು(ಶುಕ್ರವಾರ) ಭೇಟಿ ನೀಡಿದ್ದಾರೆ.
ರಾಮಗುಲಾಂ ಅವರು ತಮ್ಮ ಪತ್ನಿ ವೀಣಾ ಅವರರೊಂದಿಗೆ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಪೂಜೆಯ ವೇಳೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ , ರಾಜ್ಯ ಹಣಕಾಸು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಖನ್ನಾ ಅವರು ಉಪಸ್ಥಿತರಿದ್ದರು.
ರಾಮಗುಲಾಂ ಅವರು ಸೆ.9ರಂದು ಮುಂಬೈಗೆ ಬಂದಿದ್ದು, ಸೆ.16ರವರೆಗೆ ಅವರು ಭಾರತದಲ್ಲಿ ಇರಲಿದ್ದಾರೆ.
ವಾರಾಣಸಿಯ ಕಾಶಿ ವಿಶ್ವನಾಥ ದೇಗುಲಕ್ಕೆ ಮಾರಿಷಸ್ ಪ್ರಧಾನಿ ಭೇಟಿ
ಬುಧವಾರ ವಾರಾಣಸಿಗೆ ಆಗಮಿಸಿದ್ದ ರಾಮಗುಲಾಂ ಅವರನ್ನು ರಾಜ್ಯಪಾಲರು ಮತ್ತು ಹಣಕಾಸು ಸಚಿವ ಸುರೇಶ್ ಖನ್ನಾ ಬರಮಾಡಿಕೊಂಡಿದ್ದರು. ಗುರುವಾರ ಸಂಜೆ ಇಲ್ಲಿನ ದಶಾಶ್ವಮೇಧ ಘಾಟ್‌ನಲ್ಲಿ ನಡೆದ ಗಂಗಾ ಆರತಿಯಲ್ಲೂ ಅವರು ಪಾಲ್ಗೊಂಡಿದ್ದರು.
ರಾಮಗುಲಾಂ ಅವರು ಅಯೋಧ್ಯೆಗೂ ಭೇಟಿ ನೀಡಿದ್ದು, ಇಲ್ಲಿನ ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಅಯೋಧ್ಯೆ ವಿಮಾನ ನಿಲ್ದಾಣದಲ್ಲಿ ಮಾರಿಷಸ್ ಪ್ರಧಾನಿ ರಾಮಗುಲಾಂ ಅವರನ್ನು ಸ್ವಾಗತಿಸಿದ ಸಿಎಂ ಯೋಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.