ಲಖನೌ: ‘ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟಕ್ಕೆ ಯಾವ ಸಂದರ್ಭದಲ್ಲಿ ಯಾವ ಪಕ್ಷದ ಜೊತೆ ಕೈಜೋಡಿಸುವ ಅಗತ್ಯ ಎದುರಾಗುತ್ತದೆ ಎಂಬ ಅಂದಾಜು ಇಲ್ಲ. ಹೀಗಾಗಿ, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸೇರಿ ‘ಇಂಡಿಯಾ’ದ ಭಾಗವಾಗದ ಯಾವ ಪಕ್ಷದ ವಿರುದ್ಧವೂ ಅಸಂಬದ್ಧ ಹೇಳಿಕೆ ನೀಡಬೇಡಿ’ ಎಂದು ಬಿಎಸ್‌ಪಿ ಮುಖ್ಯಸ್ಥ ಮಾಯಾವತಿ ಅವರು ಗುರುವಾರ ಹೇಳಿದ್ದಾರೆ.
‘ಇಂಡಿಯಾ’ ಮೈತ್ರಿಕೂಟವನ್ನು ಬಿಎಸ್‌ಪಿ ಸೇರುವುದಿಲ್ಲ ಎಂದೇ ಮಾಯಾವತಿ ಪ್ರತಿಪಾದಿಸುತ್ತಿದ್ದರು. ‘ಇಂಡಿಯಾ’ ಸೇರುವ ಆಯ್ಕೆಯು ಮಾಯಾವತಿ ಎದುರು ಈಗಲೂ ಇದೆ ಎಂದು ಈ ಹೇಳಿಕೆಯು ಸುಳಿವು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.