ADVERTISEMENT

ಬಿಎಸ್‌ಪಿ ಅಧ್ಯಕ್ಷೆಯಾಗಿ ಮಾಯಾವತಿ ಪುನರಾಯ್ಕೆ

ಪಿಟಿಐ
Published 28 ಆಗಸ್ಟ್ 2019, 16:46 IST
Last Updated 28 ಆಗಸ್ಟ್ 2019, 16:46 IST
Lucknow: Bahujan Samaj Party (BSP) supremo Mayawati waves as she is garlanded by the party workers after being re-elected as the party president during a meeting, at BSP headquarters in Lucknow, Wednesday, Aug 28, 2019. BSP MP Satish Chandra Mishra is also seen. (PTI Photo/ Nand Kumar) (PTI8_28_2019_000039A)

ಲಖನೌ: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆಯಾಗಿ ಮಾಯಾವತಿ ಅವರು ಬುಧವಾರ ಸರ್ವಾನುಮತದಿಂದ ಪುನರಾಯ್ಕೆಯಾದರು.

ಪಕ್ಷದ ಕೇಂದ್ರ ಕಾರ್ಯಕಾರಿ ಸಮಿತಿಯ ಹಿರಿಯ ಪದಾಧಿಕಾರಿಗಳು, ರಾಜ್ಯ ಘಟಕಗಳ ಪ್ರತಿನಿಧಿಗಳು ಮತ್ತು ದೇಶದಾದ್ಯಂತ ಆಯ್ಕೆಯಾಗಿರುವ ಪಕ್ಷದ ಪ್ರತಿನಿಧಿಗಳ ವಿಶೇಷ ಸಭೆಯಲ್ಲಿ ಈ ಆಯ್ಕೆ ನಡೆಯಿತು ಎಂದು ಬಿಎಸ್‌ಪಿ ಪ್ರಕಟಣೆ ತಿಳಿಸಿದೆ.

ತನ್ನನ್ನು ಮರು ಆಯ್ಕೆ ಮಾಡಿದ ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದ ಮಾಯಾವತಿ ಅವರು, ಬಿಎಸ್‌ಪಿ ಆಂದೋಲನವನ್ನು ಬದ್ಧತೆಯಿಂದ ನಿರಂತರವಾಗಿ ಮುಂದುವರೆಸುವುದಾಗಿ ಭರವಸೆ ನೀಡಿದರು.

ADVERTISEMENT

ಪಕ್ಷ ಮತ್ತು ಚಳವಳಿಯ ಹಿತದೃಷ್ಟಿಯಿಂದ ಎಂದಿಗೂ ‘ನಿಲ್ಲುವುದಿಲ್ಲ ಅಥವಾ ಬಾಗುವುದಿಲ್ಲ, ಮುರಿಯಲು ಬಿಡುವುದಿಲ್ಲ’ ಎಂದು ಅವರು ಇದೇ ವೇಳೆ ಪ್ರತಿಜ್ಞೆ ಮಾಡಿದರು.

ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್‌ ಮತ್ತು ದೆಹಲಿಯಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಎಸ್‌ಪಿ ಪೂರ್ಣ ಬಲದೊಂದಿಗೆ ಸ್ಪರ್ಧಿಸಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.