ADVERTISEMENT

ಬಾಂಗ್ಲಾದೇಶದಲ್ಲಿ MBBS ಸೀಟು ಕೊಡಿಸುವುದಾಗಿ ವಂಚನೆ: ಕಾಶ್ಮೀರದಲ್ಲಿ 6 ಕಡೆ ಶೋಧ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:31 IST
Last Updated 30 ಆಗಸ್ಟ್ 2025, 7:31 IST
<div class="paragraphs"><p>ಚಿತ್ರ ಕೃಪೆ: ಪ್ರಾತಿನಿಧಿಕ ಚಿತ್ರ</p></div>

ಚಿತ್ರ ಕೃಪೆ: ಪ್ರಾತಿನಿಧಿಕ ಚಿತ್ರ

   

ಶ್ರೀನಗರ: ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಬಾಂಗ್ಲಾದೇಶದಲ್ಲಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಣಿವೆ ರಾಜ್ಯದ ಆರು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಕಾಶ್ಮೀರದ ಅಪರಾಧ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಂಚನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ADVERTISEMENT

ಘಟನೆ ಸಂಬಂಧ ಅಪರಾಧ ವಿಭಾಗದ ಆರ್ಥಿಕ ಅಪರಾಧಗಳ ವಿಭಾಗವು ತನಿಖೆ ನಡೆಸುತ್ತಿದೆ. ವೈದ್ಯಕೀಯ ಪ್ರವೇಶ ಕೊಡಿಸುವ ನೆಪದಲ್ಲಿ ನಾಲ್ವರು ಆರೋಪಿಗಳು ಹೆಚ್ಚಿನ ಹಣವನ್ನು ಪಡೆದುಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಅವರು ಪಡೆದ ಹಣ ಯಾವುದೇ ವೈದ್ಯಕೀಯ ಕಾಲೇಜಿಗೆ ವರ್ಗಾವಣೆ ಆಗಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ವಂಚನೆ ಮಾಡಿರುವುದು ದೃಢಪಟ್ಟಿವೆ ಎಂದು ಅಪರಾಧ ವಿಭಾಗದ ವಕ್ತಾರರು ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸೆಕ್ಷನ್ 420 ಮತ್ತು 120-ಬಿ ಅಡಿಯಲ್ಲಿ ಶಿಕ್ಷಾರ್ಹ ವಂಚನೆ ಮತ್ತು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿಗಳಾದ ಪೀರ್ಜಾದಾ ಆಬಿದ್, ಸೈಯದ್ ಅವರನ್ನು ಬಿಜ್‌ಬೆಹರಾದ, ಪುಲ್ವಾಮಾದ ಕರೀಮಾಬಾದ್‌ನ ವಾಸಿಗಳೆಂದು ಅಧಿಕಾರಿಗಳು ಹೇಳಿದ್ದಾರೆ.

ಆಬಿದ್ ಎಂಬ ಆರೋಪಿಯು ಯುರೋಪ್ ಕನ್ಸಲ್ಟೆನ್ಸಿ ಸೆಂಟರ್ ಶೈಕ್ಷಣಿಕ ಸಲಹಾ ಸಂಸ್ಥೆಯ ಮಾಲೀಕರಾಗಿದ್ದರೆ, ಉಳಿದವರು ಓವರ್ಸೀಸ್ ಕನ್ಸಲ್ಟೆನ್ಸಿಯ ಒಡೆತನ ಹೊಂದಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.