ADVERTISEMENT

ಎಂಸಿಡಿ ಚುನಾವಣೆ: ಸಿಖ್ ಸಮುದಾಯವನ್ನು ಕಾಂಗ್ರೆಸ್‌ ಅವಮಾನಿಸಿದೆ: ಬಿಜೆಪಿ ಆರೋಪ

ಪಿಟಿಐ
Published 11 ನವೆಂಬರ್ 2022, 14:39 IST
Last Updated 11 ನವೆಂಬರ್ 2022, 14:39 IST
   

ನವದೆಹಲಿ:‘ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆ ಸಂಬಂಧ ರಚಿಸಿರುವ ಚುನಾವಣಾ ಸಮಿತಿಗೆ‘ಸಿಖ್ಖರ ಕೊಲೆಪಾತಕ’ ಜಗದೀಶ್‌ ಟೈಟ್ಲರ್‌ ಅವರನ್ನು ಆಯ್ಕೆ ಮಾಡುವ ಮೂಲಕ ಸಿಖ್‌ ಸಮುದಾಯದವನ್ನುಕಾಂಗ್ರೆಸ್‌ ಅವಮಾನಿಸಿದೆ’ ಎಂದು ಬಿಜೆಪಿ ಮುಖಂಡ ಮನ್‌ಜೀತ್‌ ಸಿಂಗ್ ಸಿರ್ಸಾ ದೂರಿದ್ದಾರೆ.

ಈ ಸಂಬಂಧ ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಿರ್ಸಾ ಅವರು, ‘ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ನ ಅಧ್ಯಕ್ಷರಾದ ಬಳಿಕ ಪಕ್ಷದ ಧೋರಣೆ ಬದಲಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಗಾಂಧಿ ಕುಟುಂಬದ ಒತ್ತಡ ಕಾರಣದಿಂದಾಗಿ ಸಿಖ್ಖರ ಕೊಲೆಪಾತಕರನ್ನು ರಕ್ಷಿಸಲಾಗುತ್ತಿದೆ’ ಎಂದರು.

‘ಸಿಖ್ಖರ ಮತಗಳನ್ನು ಪಡೆದು ಪಂಜಾಬ್‌ನಲ್ಲಿ ಅಧಿಕಾರಕ್ಕೇರಿದ ಆಮ್‌ ಆದ್ಮಿ ಪಕ್ಷವು ಈ ಕುರಿತು ಮೌನ ತಾಳಿದೆ. 1984ರ ಸಿಖ್‌ ದಂಗೆಯ ಕೊಲೆಗಾರರನ್ನು ಶಿಕ್ಷಿಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಪ್ರತಿಜ್ಞೆ ಮಾಡಿದ್ದರು. ಬಹುಶಃ ಅವರು ತಮ್ಮ ಪ್ರತಿಜ್ಞೆಯನ್ನು ಮರೆತಂತಿದೆ’ ಎಂದು ವ್ಯಂಗ್ಯವಾಡಿದರು.

ADVERTISEMENT

ಜಗದೀಶ್‌ ಅವರು ದೆಹಲಿ ಕಾಂಗ್ರೆಸ್‌ನ ನಾಯಕರಾಗಿದ್ದರು. ಕೇಂದ್ರ ಸಚಿವರೂ ಆಗಿದ್ದರು. ಸಿಖ್ ಧಂಗೆಯ ಕುರಿತು ತನಿಖೆ ನಡೆಸಿದ ನಾನಾವತಿ ಸಮಿತಿಯು, ತನ್ನ ವರದಿಯಲ್ಲಿ ಜಗದೀಶ್‌ ಅವರು ಹೆಸರನ್ನು ಉಲ್ಲೇಖಿಸಿತ್ತು. ನಂತರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.