ADVERTISEMENT

ಮೇಘಾಲಯ: ಭಾರಿ ಮಳೆಯಿಂದ ಭೂಕುಸಿತ, ಇಬ್ಬರು ಸಾವು

ಪಿಟಿಐ
Published 5 ಏಪ್ರಿಲ್ 2022, 11:29 IST
Last Updated 5 ಏಪ್ರಿಲ್ 2022, 11:29 IST
ಮೇಘಾಲಯದ ಸಿಯಾಟ್‌ಬಕಾನ್ ಗ್ರಾಮದ ಬಳಿ ನಿರಂತರ ಮಳೆಯಿಂದ ಉಂಟಾದ ಭೂಕುಸಿತದಿಂದ ಹಾನಿಗೀಡಾದ  ಶಿಲ್ಲಾಂಗ್-ಡಾವ್ಕಿ ರಸ್ತೆಯಲ್ಲಿ ಕಾರು ಸಿಲುಕಿಕೊಂಡಿರುವುದು            ಪಿಟಿಐ ಚಿತ್ರ
ಮೇಘಾಲಯದ ಸಿಯಾಟ್‌ಬಕಾನ್ ಗ್ರಾಮದ ಬಳಿ ನಿರಂತರ ಮಳೆಯಿಂದ ಉಂಟಾದ ಭೂಕುಸಿತದಿಂದ ಹಾನಿಗೀಡಾದ  ಶಿಲ್ಲಾಂಗ್-ಡಾವ್ಕಿ ರಸ್ತೆಯಲ್ಲಿ ಕಾರು ಸಿಲುಕಿಕೊಂಡಿರುವುದು            ಪಿಟಿಐ ಚಿತ್ರ   

ಶಿಲ್ಲಾಂಗ್‌ (ಪಿಟಿಐ): ಮೇಘಾಲಯದಲ್ಲಿ ಸುರಿದ ಭಾರಿ ಮಳೆಯಿಂದ ಹಲವೆಡೆ ಭೂಕುಸಿತ ಉಂಟಾಗಿ ಮನೆಗಳು, ವಾಹನಗಳು ಕೊಚ್ಚಿ ಹೋಗಿವೆ. ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಏಳು ಕಡೆ ಭೂಕುಸಿತ ಉಂಟಾಗಿದೆ. ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಮೌಲಾತ್ ಗ್ರಾಮದಲ್ಲಿ ಉಂಟಾದ ಭೂಕುಸಿತದಲ್ಲಿ ಇಬ್ಬರು ಮೃತಪಟ್ಟಿದ್ದಾರೆಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳಿದರು.

ಉಂಬಳಾಯಿ ಗ್ರಾಮದಲ್ಲಿ ಸಂಭವಿಸಿದ ಮತ್ತೊಂದು ಭೂಕುಸಿತದಲ್ಲಿ ಎರಡು ಮನೆಗಳು ಮತ್ತು ಎರಡು ಅಂಗಡಿಗಳು ಕೊಚ್ಚಿ ಹೋಗಿವೆ. ತಂಗ್ಬನೈ-ಮೌಲಿಂಗೋಟ್ ರಸ್ತೆಯ ಒಂದು ಭಾಗವು ಹಾನಿಗೀಡಾಗಿದ್ದು ವಾಹನವು ಕೊಚ್ಚಿಹೋಗಿದೆ. ರಸ್ತೆಯನ್ನು ತೆರವುಗೊಳಿಸುವ ಕಾಮಗಾರಿ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.