ADVERTISEMENT

ಮೇಘಾಲಯ: ಹೊಸ ಉಗ್ರಗಾಮಿ ಸಂಘಟನೆಯ 11 ಜನರ ಬಂಧನ, ಬಂದೂಕು ವಶ

ಪಿಟಿಐ
Published 2 ಅಕ್ಟೋಬರ್ 2021, 5:14 IST
Last Updated 2 ಅಕ್ಟೋಬರ್ 2021, 5:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತುರಾ: ಹೊಸದಾಗಿ ಸ್ಥಾಪನೆಯಾಗಿದ್ದ ಉಗ್ರಗಾಮಿ ಸಂಘಟನೆಯ 11 ಸದಸ್ಯರನ್ನು ಮೇಘಾಲಯದ ಪೊಲೀಸರು ವೆಸ್ಟ್‌ ಗಾರೊ ಹಿಲ್ಸ್‌ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

ಅಚಿಕ್ ನ್ಯಾಷನಲ್ ಸೋಷಿಯಲಿಸ್ಟ್‌ ಕೌನ್ಸಿಲ್‌ ಹೆಸರಿನ ಈ ಸಂಘಟನೆಯ ಸ್ವಘೋಷಿತ ನಾಯಕ ಚೆಕಂ ಸಂಗ್ಮಾ ಎಂಬಾತನನ್ನು ಜಿಲ್ಲೆಯ ಹವಾಖಾನಾ ಎಂಬಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಸೆ.25ರಂದು ಈತನನ್ನು ಬಂಧಿಸಲಾಗಿತ್ತು. ತನಿಖೆಯಲ್ಲಿ ತಾನು ಸಮಾನ ಮನಸ್ಕರ 30 ಜನರ ಜೊತೆಗೂಡಿ ಹೊಸ ಸಂಘಟನೆ ಸ್ಥಾಪಿಸಿರುವುದಾಗಿ ತಿಳಿಸಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ ಸಿಂಗ್ ಹೇಳಿಕೆ ನೀಡಿದ್ದಾರೆ.

ADVERTISEMENT

ಮಾಹಿತಿ ಆಧರಿಸಿ ಇತರರ ಬಂಧಿಸಲಾಯಿತು. ಇವರಿಂದ ಎರಡು ಗನ್‌, ಒಂದು ಪಿಸ್ತೂಲ್ ಜಪ್ತಿ ಮಾಡಲಾಗಿದೆ. ಅಪಹರಣ, ಸುಲಿಗೆ ಇತ್ಯಾದಿ ಕೃತ್ಯ ಎಸಗಲು ಹೊಂಚುಹಾಕಿದ್ದು, ಪೂರಕವಾಗಿ ಶಸ್ತ್ರಾಸ್ತ್ರಗಳ ಸಂಗ್ರಹದಲ್ಲಿ ತೊಡಗಿತ್ತು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.