ADVERTISEMENT

ಹಣ ಅಕ್ರಮ ವರ್ಗಾವಣೆ: ಮೆಹಬೂಬಾ ಮುಫ್ತಿ ತಾಯಿ ಇ.ಡಿ ಮುಂದೆ ಹಾಜರು

ಪಿಟಿಐ
Published 18 ಆಗಸ್ಟ್ 2021, 11:34 IST
Last Updated 18 ಆಗಸ್ಟ್ 2021, 11:34 IST
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ   

ಶ್ರೀನಗರ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ತಾಯಿ ಗುಲ್ಶನ್‌ ನಸೀರ್‌ ಅವರು ಜಾರಿ ನಿರ್ದೇಶನಾಲಯದ(ಇ.ಡಿ) ಮುಂದೆ ಬುಧವಾರವಿಚಾರಣೆಗೆ ಹಾಜರಾದರು.

‘ಗುಲ್ಶನ್‌ ನಸೀರ್‌ ಅವರು ತಮ್ಮ ಮಗಳು ಮೆಹಬೂಬಾ ಮುಫ್ತಿ ಅವರೊಂದಿಗೆ ಇಲ್ಲಿನ ಇ.ಡಿ ಕಚೇರಿಗೆ ಬುಧವಾರ ಬಂದಿದ್ದರು’ ಎಂದು ಅಧಿಕಾರಿಗಳು ತಿಳಿಸಿದರು.

ಈ ಹಿಂದೆಯೂ ಮೂರು ಬಾರಿ ಗುಲ್ಶನ್‌ ನಸೀರ್‌ಗೆ ಇ.ಡಿ ಸಮನ್ಸ್‌ ಜಾರಿ ಮಾಡಿತ್ತು.

ADVERTISEMENT

ಮೆಹಬೂಬಾ ಮುಫ್ತಿ ಅವರ ಸಹಚರರೊಬ್ಬರ ಮನೆ ಮೇಲೆ ಇ.ಡಿ ದಾಳಿ ನಡೆಸಿದ್ದಾಗ, ಅಲ್ಲಿಂದ ಎರಡು ಡೈರಿಗಳನ್ನು ವಶಕ್ಕೆ ಪಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಇ.ಡಿ ಪ್ರಕರಣ ದಾಖಲಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಗಳ ವಿವೇಚನಾ ನಿಧಿಯಿಂದ ಹಣ ಅಕ್ರಮ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಮಾಹಿತಿಗಳು ಈ ಡೈರಿಯಲ್ಲಿ ಸಿಕ್ಕಿವೆ.

‘ಆ ನಿಧಿಯಿಂದ ಗುಲ್ಶನ್‌ ನಸೀರ್‌ ಮತ್ತು ಇತರರ ಖಾತೆಗೆ ಲಕ್ಷಾಂತರ ರೂಪಾಯಿ ವರ್ಗಾಯಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಇ.ಡಿ ಗುಲ್ಶನ್‌ ಅವರನ್ನು ಪ್ರಶ್ನಿಸಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.