
ಪಿಟಿಐ
ಮೆಹುಲ್ ಚೋಕ್ಸಿ
ನವದೆಹಲಿ : ತನ್ನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ಪ್ರಶ್ನಿಸಿ ದೇಶಭ್ರಷ್ಟ ವಜ್ರಾಭರಣ ವ್ಯಾಪಾರಿ ಮೆಹುಲ್ ಚೋಕ್ಸಿ ಸಲ್ಲಿಸಿದ್ದ ಅರ್ಜಿಯನ್ನು ಬೆಲ್ಜಿಯಂನ ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ₹13,000 ಕೋಟಿ ವಂಚಿಸಿದ ಆರೋಪವನ್ನು ಚೋಕ್ಸಿ ಎದುರಿಸುತ್ತಿದ್ದಾರೆ.
ಹಗರಣ ಪತ್ತೆಯಾಗುವ ಮುನ್ನ 2018ರ ಜನವರಿಯಲ್ಲಿ ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡಾಗೆ ಪರಾರಿಯಾಗಿದ್ದರು. ಬಳಿಕ ಚಿಕಿತ್ಸೆ ಪಡೆಯುವ ನೆಪದಲ್ಲಿ ಬೆಲ್ಜಿಯಂಗೆ ತೆರಳಿದ್ದರು. ಮುಂಬೈ ವಿಶೇಷ ನ್ಯಾಯಾಲಯ ಹೊರಡಿಸಿದ ಬಂಧನದ ವಾರಂಟ್‌ಗಳ ಆಧಾರ ಮೇಲೆ ಭಾರತವು 2024ರ ಆಗಸ್ಟ್ 27ರಂದು ಚೋಕ್ಸಿಯನ್ನು ಹಸ್ತಾಂತರಿಸುವಂತೆ ಬೆಲ್ಜಿಯಂಗೆ ಮನವಿ ಮಾಡಿತ್ತು.
ಅವರ ಹಸ್ತಾಂತರ ಪ್ರಕ್ರಿಯೆಗೆ ಶೀಘ್ರವೇ ಚಾಲನೆ ಸಿಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.