ADVERTISEMENT

ಮೇಕೆದಾಟು ಯೋಜನೆಗೆ ವಿರೋಧ: ಸಂಸದರ ಅಮಾನತು ತೆರವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 20:22 IST
Last Updated 7 ಜನವರಿ 2019, 20:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮೇಕೆದಾಟು ಯೋಜನೆ ವಿರೋಧಿಸಿ ಪ್ರತಿಭಟನೆ ಮುಂದುವರಿಸಿರುವ ಎಐಎಡಿಎಂಕೆ ಸಂಸದರ ಅಮಾನತು ಆದೇಶ ತೆರವುಗೊಳಿಸುವಂತೆ ಲೋಕಸಭೆಯ ಉಪಸಭಾಧ್ಯಕ್ಷ ಎಂ.ತಂಬಿದುರೈ ಅವರು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರನ್ನು ಕೋರಿದರು.

ಸೋಮವಾರ ಮತ್ತೆ ಪ್ರತಿಭಟನೆ ನಡೆಸಿದ ಎಐಎಡಿಎಂಕೆಯ ಕೆ.ಎನ್‌. ರಾಮಚಂದ್ರನ್‌, ಪಿ.ವೇಣುಗೋಪಾಲ್‌ ಹಾಗೂ ಕೆ.ಕೆ. ಗೋಪಾಲ್‌ ಹಾಗೂ ವಿಶೇಷ ಸ್ಥಾನಮಾನ ಕೋರಿದ ಆಂಧ್ರದ ತೆಲುಗು ದೇಶಂ ಪಕ್ಷದ ಎನ್‌.ಶಿವಪ್ರಸಾದ್‌ ಅವರನ್ನು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅಮಾನತುಗೊಳಿಸಿದರು.

ತಮಿಳುನಾಡಿನ ಹಿತಾಸಕ್ತಿಗೆ ವಿರುದ್ಧವಾಗಿ ಕರ್ನಾಟಕ ಮೇಕೆದಾಟು ಯೋಜನೆ ಆರಂಭಿಸುತ್ತಿದೆ ಎಂದು ತಂಬಿದುರೈ ಹೇಳಿದರು. ಕೇಂದ್ರ ಜಲಸಂಪನ್ಮೂಲ ಸಚಿವರು ಸ್ಪಷ್ಟನೆ ನೀಡಿದ್ದರೂ ಪ್ರತಿಭಟಿಸುವುದು ಸರಿಯಲ್ಲ ಎಂದು ಈ ವೇಳೆ ಹಾವೇರಿ ಸಂಸದ ಶಿವಕುಮಾರ್‌ ಉದಾಸಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.