ಚಂಡೀಗಡ: ‘ಪುರುಷರು ತಮ್ಮ ಮನಸ್ಸನ್ನು ಬಲಪಡಿಸಿಕೊಂಡು, ಮಹಿಳೆಯರನ್ನು ಹಿಜಾಬ್ನಿಂದ ಮುಕ್ತಗೊಳಿಸಬೇಕು’ ಎಂದು ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಗುರುವಾರ ತಿಳಿಸಿದ್ದಾರೆ.
ಹಿಜಾಬ್ ಕುರಿತು ಸುಪ್ರೀಂ ಕೋರ್ಟ್ನ ದ್ವಿಸದಸ್ಯ ಪೀಠ ಭಿನ್ನ ತೀರ್ಪು ಪ್ರಕಟಿಸುವುದಕ್ಕೂ ಮುನ್ನ ವಿಜ್ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ. ‘ಮಹಿಳೆಯರನ್ನು ನೋಡಿ ಉತ್ಸಾಹ ನಿಯಂತ್ರಿಸಲು ಸಾಧ್ಯವಾಗದ ಪುರುಷ ರಿಂದಾಗಿಯೇ ಒತ್ತಾಯಪೂರ್ವಕವಾಗಿ ಹಿಜಾಬ್ ಧರಿಸುವಂತಾಗಿದೆ. ಇಲ್ಲಿ ಮಹಿಳೆಯರೇ ಶಿಕ್ಷೆ ಅನುಭವಿಸುವಂತಾಗಿದೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.