
ಪಿಟಿಐ
ಮುಂಬೈ: ಮಹಾರಾಷ್ಟ್ರದ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮುಟ್ಟು ನಿಲ್ಲುವ ವಯೋಮಾನದ ಮಹಿಳೆಯರಿಗಾಗಿಯೇ ಪ್ರತ್ಯೇಕ ‘ಮೆನೋಪಾಸ್’ ಕ್ಲಿನಿಕ್‌ಗಳನ್ನು ಆರಂಭಿಸಲಾಗಿದೆ. ದೇಶದಲ್ಲಿಯೇ ಇದು ಮೊದಲ ಯೋಜನೆಯಾಗಿದೆ.
ವೈದ್ಯಕೀಯ ಸಲಹೆ, ಮಾನಸಿಕ ಆರೋಗ್ಯಕ್ಕಾಗಿ ಸಮಾಲೋಚನೆ, ಮೂಳೆಗೆ ಸಂಬಂಧಿಸಿದ ಸಮಸ್ಯೆ ತಿಳಿಯಲು ಸ್ಕ್ಯಾನಿಂಗ್ ಸೌಲಭ್ಯ, ಹೃದಯ ಮತ್ತು ಹಾರ್ಮೋನ್‌ಗಳ ಆರೋಗ್ಯದ ಕುರಿತು ಈ ಕ್ಲಿನಿಕ್‌ಗಳಲ್ಲಿ ಮಾರ್ಗದರ್ಶ ನೀಡಲಾಗುತ್ತದೆ. ಜೊತೆಗೆ, ಇಲ್ಲಿಯೇ ಔಷಧಗಳೂ ದೊರೆಯುತ್ತವೆ.
‘ಆರೋಗ್ಯ ಸಚಿವೆ ಮೇಘನಾ ಬೋರ್ಡಿಕರ್ ಅವರ ಮಾರ್ಗದರ್ಶನದಲ್ಲಿ ಈ ಯೋಜನೆ ರೂಪಿಸಲಾಗಿದೆ. ಜ.14ರಂದು ಸಂಕ್ರಾಂತಿಯ ದಿನವೇ ಈ ಯೋಜನೆ ಜಾರಿಯಾಗಿದೆ. ಈ ಕ್ಲಿನಿಕ್‌ಗಳಿಗೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.