ADVERTISEMENT

ಮೆಸ್ಸಿ ಕಾರ್ಯಕ್ರಮ: ಆಯೋಜಕನ ಮನೆ ಶೋಧ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 15:40 IST
Last Updated 19 ಡಿಸೆಂಬರ್ 2025, 15:40 IST
<div class="paragraphs"><p>ಲಿಯೊನೆಲ್‌ ಮೆಸ್ಸಿ ಹಾಗೂ&nbsp;ಕೋಲ್ಕತ್ತದ ಸಾಲ್ಟ್‌ ಲೇಕ್‌ ಕ್ರೀಡಾಂಗಣ</p></div>

ಲಿಯೊನೆಲ್‌ ಮೆಸ್ಸಿ ಹಾಗೂ ಕೋಲ್ಕತ್ತದ ಸಾಲ್ಟ್‌ ಲೇಕ್‌ ಕ್ರೀಡಾಂಗಣ

   

ಕೃಪೆ: ಪಿಟಿಐ

ಕೋಲ್ಕತ್ತ (ಪಿಟಿಐ): ಇಲ್ಲಿನ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ಕಳೆದವಾರ ಫುಟ್‌ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿ ಅವರ ಕಾರ್ಯಕ್ರಮದ ವೇಳೆ ನಡೆದ ಅವ್ಯವಸ್ಥೆ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ಪೊಲೀಸರು, ಕಾರ್ಯಕ್ರಮದ ಆಯೋಜಕನ ನಿವಾಸದಲ್ಲಿ ಶುಕ್ರವಾರ ಶೋಧ ನಡೆಸಿದರು.

ADVERTISEMENT

ಆಯೋಜಕ ಶತಾದ್ರು ದತ್ತಾ ಅವರನ್ನು ಡಿ. 13ರಂದು ಬಂಧಿಸಲಾಗಿದ್ದು, ಶುಕ್ರವಾರ ಅವರ ಮನೆಯ ಶೋಧ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ರೀಡಾಂಗಣದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಕೋಲ್ಕತ್ತ ಮತ್ತು ನೆರೆ ಪ್ರದೇಶಗಳ ಮೂವರು ವ್ಯಕ್ತಿಗಳನ್ನು ಶುಕ್ರವಾರ ಬಂಧಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.