ADVERTISEMENT

Operation Sindoor | ಅಮೃತಸರ: ಲೋಹದ ಅವಶೇಷ ಪತ್ತೆ

ಪಿಟಿಐ
Published 8 ಮೇ 2025, 13:56 IST
Last Updated 8 ಮೇ 2025, 13:56 IST
<div class="paragraphs"><p>ಅಮೃತಸರ ಹೊರವಲಯದ ಕೃಷಿಭೂಮಿಯಲ್ಲಿ ಗುರುವಾರ ಲೋಹದ ಅವಶೇಷ ಪತ್ತೆಯಾಗಿದೆ</p></div>

ಅಮೃತಸರ ಹೊರವಲಯದ ಕೃಷಿಭೂಮಿಯಲ್ಲಿ ಗುರುವಾರ ಲೋಹದ ಅವಶೇಷ ಪತ್ತೆಯಾಗಿದೆ

   

–ಪಿಟಿಐ ಚಿತ್ರ

ಅಮೃತಸರ: ನಗರದ ಹೊರವಲಯದಲ್ಲಿರುವ ಜೇಠುವಾಲ ಗ್ರಾಮದಲ್ಲಿ ಗುರುವಾರ ಲೋಹದ ಭಗ್ನಾವಶೇಷಗಳು ಪತ್ತೆಯಾಗಿವೆ. ಇವು ಕ್ಷಿಪಣಿಗಳ ಅವಶೇಷಗಳಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. 

ADVERTISEMENT

ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಬೆನ್ನಲ್ಲೇ ಈ ಅವಶೇಷ ಪತ್ತೆಯಾಗಿದೆ.

ಜೇಠೂವಾಲದ ಬಯಲು ಪ್ರದೇಶ ಹಾಗೂ ಕೆಲ ಮನೆಗಳ ಬಳಿ ಈ ಅವಶೇಷಗಳು ಪತ್ತೆಯಾಗಿವೆ. ಆಸ್ತಿಪಾಸ್ತಿಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. 

ಅವಶೇಷಗಳು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ, ಪೊಲೀಸರು ಈ ಕುರಿತು ಸೇನೆಗೆ ಮಾಹಿತಿ ನೀಡಿದ್ದಾರೆ.

ಪತ್ತೆಯಾದ ವಸ್ತುಗಳು ಯಾವುವು ಎಂದು ತನಿಖೆಯ ಬಳಿಕವಷ್ಟೇ ಖಚಿತವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಮಧ್ಯೆ, ಅಮೃತಸರ ಜಿಲ್ಲಾಡಳಿತವು ಗುರುವಾರ ನಸುಕಿನಲ್ಲಿ ನಾಗರಿಕರ ಸ್ವರಕ್ಷಣಾ ತಾಲೀಮನ್ನೂ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.