ADVERTISEMENT

ಮಹದಾಯಿ: ಗೋವಾದ ವಿವಿಧ ಸಂಘಟನೆಗಳಿಂದ ಪ್ರತಿಭಟನೆಗೆ ಸಿದ್ಧತೆ

ಪಿಟಿಐ
Published 11 ಫೆಬ್ರುವರಿ 2023, 14:38 IST
Last Updated 11 ಫೆಬ್ರುವರಿ 2023, 14:38 IST
.
.   

ಪಣಜಿ: ಮಹದಾಯಿ ನದಿ ಜಲಾನಯನ ಪ್ರದೇಶದಿಂದ ನೀರನ್ನು ಬೇರೆಡೆಗೆ ತಿರುಗಿಸುವ ಕರ್ನಾಟಕದ ಯೋಜನೆಯನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲು ಗೋವಾದ ವಿವಿಧ ಸಂಘಟನೆಗಳು ತೀರ್ಮಾನಿಸಿವೆ. ‌

ಇದರ ಅಂಗವಾಗಿ ಭಾನುವಾರ ರಾತ್ರಿ 7.30ಕ್ಕೆ ಮಣ್ಣಿನ ಹಣತೆಗಳನ್ನು ಬೆಳಗಿಸುವಂತೆ ‘ಸೇವ್‌ ಮಹದಾಯಿ, ಸೇವ್‌ ಗೋವಾ ಫ್ರಂಟ್‌’ ಆಶ್ರಯದಲ್ಲಿ, ಸ್ವಯಂ ಸೇವಾ ಸಂಸ್ಥೆಗಳು (ಎನ್‌ಜಿಒ) ಜನರಲ್ಲಿ ಮನವಿ ಮಾಡಿವೆ.

ಮಹದಾಯಿ ವಿಚಾರವಾಗಿ ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಪ್ರಜಾಲ್ ಸಖರ್ದಂಡೆ ಹೇಳಿದ್ದಾರೆ.

ADVERTISEMENT

ಮಣ್ಣಿನ ಹಣತೆಗಳನ್ನು ಬೆಳಗುವ ಕಾರ್ಯಕ್ರಮದಲ್ಲಿ ಎಲ್ಲಾ 40 ಶಾಸಕರು ಪಾಲ್ಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹೃದಯನಾಥ ಶಿರೋಡ್ಕರ್‌ ಆಗ್ರಹಿಸಿದ್ದಾರೆ.

ನದಿ ನೀರು ವಿಚಾರವಾಗಿ ಕರ್ನಾಟಕವು ಒಪ್ಪಂದಗಳನ್ನು ನಿರ್ಲಕ್ಷಿಸಿ ಏಕಪಕ್ಷೀಯವಾಗಿ ಮುಂದುವರಿಯುತ್ತಿದೆ ಎಂದು ಗೋವಾ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.