ADVERTISEMENT

ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಸಿಬ್ಬಂದಿ ಮೇಲೆ ಉಗ್ರ ದಾಳಿ

ಏಜೆನ್ಸೀಸ್
Published 29 ಅಕ್ಟೋಬರ್ 2019, 12:47 IST
Last Updated 29 ಅಕ್ಟೋಬರ್ 2019, 12:47 IST
ಎಎನ್‌ಐ ಚಿತ್ರ
ಎಎನ್‌ಐ ಚಿತ್ರ   

ಶ್ರೀನಗರ:ಜಮ್ಮು–ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ದ್ರಾಬ್‌ಗಾಮ್‌ನ ಶಾಲೆಯೊಂದರಲ್ಲಿ ಕರ್ತವ್ಯನಿರತ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಮೇಲೆ ಉಗ್ರರು ಮಂಗಳವಾರ ಸಂಜೆ ಗುಂಡಿನ ದಾಳಿ ನಡೆಸಿದ್ದಾರೆ.

ಪರೀಕ್ಷಾ ಕೇಂದ್ರಕ್ಕೆ ಭದ್ರತೆ ಒದಗಿಸುತ್ತಿದ್ದ ಸಿಬ್ಬಂದಿ ಮೇಲೆ ಉಗ್ರರು ಆರರಿಂದ ಏಳು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್, ಸಾವು–ನೋವು ಸಂಭವಿಸಿದ ವರದಿಯಾಗಿಲ್ಲ. ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ ಎಂದುಎಎನ್‌ಐಸುದ್ದಿಸಂಸ್ಥೆ ವರದಿ ಮಾಡಿದೆ.

ಯುರೋಪ್‌ ಒಕ್ಕೂಟದ ಜನಪ್ರತಿನಿಧಿಗಳ ನಿಯೋಗ ಕಣಿವೆ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲೇ ದಾಳಿ ನಡೆದಿದೆ.

ADVERTISEMENT

ಸೋಮವಾರ ಸಂಜೆ ಅನಂತ್‌ನಾಗ್‌ ಜಿಲ್ಲೆಯ ಕನಿಲ್ವಾನ್‌ ಪ್ರದೇಶದಲ್ಲಿ ಟ್ರಕ್‌ ಚಾಲಕನೊಬ್ಬನನ್ನು ಉಗ್ರರು ಹತ್ಯೆ ಮಾಡಿದ್ದರು. ಉತ್ತರ ಕಾಶ್ಮೀರದ ಸೊಪೊರ್‌ನಲ್ಲಿ ಸೋಮವಾರ ಸಂಜೆ ಉಗ್ರರು ನಡೆಸಿದ ಗ್ರೆನೇಡ್‌ ದಾಳಿಗಳಲ್ಲಿ 19 ಜನ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.