ADVERTISEMENT

ಹೈಟೆಕ್‌ ಸೇನೆ: ₹9 ಲಕ್ಷ ಕೋಟಿ ವೆಚ್ಚ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 20:15 IST
Last Updated 11 ಸೆಪ್ಟೆಂಬರ್ 2019, 20:15 IST
   

ನವದೆಹಲಿ:ಸಂಕೀರ್ಣ ಸ್ವರೂಪದ ಬೆದರಿಕೆಗಳನ್ನು ಸಮರ್ಥವಾಗಿ ನಿಭಾಯಿಸುವ ಉದ್ದೇಶದಿಂದ ಸೇನಾಪಡೆಯ ಆಧುನೀಕರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ 5ರಿಂದ 7 ವರ್ಷಗಳಲ್ಲಿ ಸೇನಾ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ಅಪಾರ ಪ್ರಮಾಣದ ಮೊತ್ತ ವೆಚ್ಚ ಮಾಡಲು ಸರ್ಕಾರ ಮುಂದಾಗಿದೆ

ಅಂಕಿ–ಅಂಶ

₹9.23 ಲಕ್ಷ ಕೋಟಿ

ADVERTISEMENT

ಸೇನೆ ಆಧುನೀಕರಣಕ್ಕೆ 5–7 ವರ್ಷಗಳಲ್ಲಿ ವೆಚ್ಚ ಮಾಡಲು ಉದ್ದೇಶಿಸಿರುವ ಮೊತ್ತ

ಆಧುನೀಕರಣದಲ್ಲಿ ಏನೇನಿದೆ?

ಸೇನಾಪಡೆಯ ಆಧುನೀಕರಣಕ್ಕೆ ಸರ್ಕಾರದ ವಿಸ್ತೃತ ಯೋಜನೆ ಸಿದ್ಧ

ಭೂಸೇನೆಯ ಬಲವರ್ಧನೆಗೆ ಆದ್ಯತೆ

ಭೂಸೇನೆ, ನೌಕಾಪಡೆ, ವಾಯುಪಡೆಗಳಿಗೆ ಬಲ ತುಂಬಲು ಆಧುನಿಕ ಸಾಮಗ್ರಿ ಖರೀದಿ

ಹೊಸ ಶಸ್ತ್ರಾಸ್ತ್ರ, ಕ್ಷಿಪಣಿ, ಯುದ್ಧವಿಮಾನ, ಜಲಾಂತರ್ಗಾಮಿ, ಸಮರನೌಕೆ ಸೇರ್ಪಡೆ

ಉತ್ತರದ ಗಡಿ, ಪಶ್ಚಿಮದ ಕರಾವಳಿಗಳೆರಡರಲ್ಲೂ ಕರ್ತವ್ಯ ನಿರ್ವಹಿಸುವಂತೆ ಸೇನೆಯ ಆಧುನೀಕರಣ

ವಾಯುಪಡೆಯ ಒಟ್ಟಾರೆ ದಾಳಿ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುವ ವಿಸ್ತೃತ ಯೋಜನೆ ಬಹುತೇಕ ಅಂತಿಮ

ದೇಶದ ಎಲ್ಲ ಪ್ರಮುಖ ನಗರಗಳ ವಾಯುಪ್ರದೇಶವನ್ನು ಅಭೇದ್ಯ ಕೋಟೆಯಂತೆ ಕಟ್ಟೆಚ್ಚರ ವಹಿಸುವ ಬೃಹತ್ ರಕ್ಷಣಾ ಯೋಜನೆಯೂ ಸಿದ್ಧ

ದೇಶೀಯ ರಕ್ಷಣಾ ಸಾಮಗ್ರಿ ತಯಾರಿಕೆ ಉದ್ದಿಮೆ ಅಭಿವೃದ್ಧಿಗೆ ಆದ್ಯತೆ; ಕೆಲ ತಿಂಗಳಲ್ಲೇ ನೀತಿ ಘೋಷಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.