ADVERTISEMENT

ಮಿಜೋರಾಂ ವಿಧಾನಸಭೆ ಸ್ಪೀಕರ್‌ ರಾಜೀನಾಮೆ: ಬಿಜೆಪಿ ಸೇರುವ ಸಾಧ್ಯತೆ

ಪಿಟಿಐ
Published 11 ಅಕ್ಟೋಬರ್ 2023, 14:15 IST
Last Updated 11 ಅಕ್ಟೋಬರ್ 2023, 14:15 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಐಜ್ವಾಲ್‌: ಮಿಜೋರಾಂ ವಿಧಾನಸಭೆಯ ಸ್ಪೀಕರ್‌ ಮತ್ತು ಎಂಎನ್‌ಎಫ್‌ (ಮಿಜೋ ನ್ಯಾಷನಲ್‌ ಫ್ರಂಟ್‌) ನಾಯಕ ಲಾಲ್‌ರಿನ್‌ಲಿಯಾನಾ ಸೈಲೊ ಅವರು ಶಾಸಕ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.

ಮಿಜೋರಾಂ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಸೇರುವುದಾಗಿ ಅವರು ಹೇಳಿದ್ದಾರೆ. ನಾಳೆ ಬಿಜೆಪಿಯ ಪ್ರಮುಖ ನಾಯಕರ ಜೊತೆ ಪಕ್ಷಕ್ಕೆ ಸರುವುದಾಗಿ ಮೂಲಗಳು ತಿಳಿಸಿವೆ.

ADVERTISEMENT

2018ರ ವಿಧಾನಸಭಾ ಚುನಾವಣೆಯಲ್ಲಿ ಚಾಲ್‌ಫಿಲ್ಹ್‌ ಕ್ಷೇತ್ರದಿಂದ ಗೆದ್ದಿದ್ದ ಸೈಲೊ ಅವರಿಗೆ ಈ ಬಾರಿ ಎಂಎನ್‌ಎಫ್‌ ಟಿಕೆಟ್‌ ನಿರಾಕರಿಸಲಾಗಿತ್ತು. 

ಸದ್ಯ ಮಿಜೋರಾಂನಲ್ಲಿ ಎಂಎನ್‌ಎಫ್‌ ಅಧಿಕಾರದಲ್ಲಿದೆ. ಈ ಚುನಾವಣೆ ಎಂಎನ್‌ಎಫ್‌ಗೆ ಕಾಂಗ್ರೆಸ್‌ ಪ್ರಬಲ ಪೈಪೋಟಿ ನೀಡಲಿದೆ ಎನ್ನಲಾಗಿದೆ. 

ಮಿಜೋರಾಂನ 40 ಸ್ಥಾನಗಳ ವಿಧಾನಸಭೆಗೆ ನವೆಂಬರ್‌ 7ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್‌ 3ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.