ಐಜ್ವಾಲ್: ಮಿಜೋರಾಂನ ಖ್ಯಾತ ಬಾಲ ಗಾಯಕಿ ಏಸ್ತೇರ್ ಲಾಲ್ದುಹಾಮಿ ಹನಾಮ್ತೆ ಅವರು ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ ಬಾಲ ಪುರಸ್ಕಾರವನ್ನು ನೀಡಲಾಗಿದೆ. ದಕ್ಷಿಣ ಮಿಜೋರಾಂನ ಹನಾಮ್ತೆ ಮೂರು ವರ್ಷದವರಿದ್ದಾಗಿನಿಂದಲೇ ಚರ್ಚ್ ಮತ್ತು ಇತರ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರು
ಎ.ಆರ್.ರೆಹಮಾನ್ ಖಾನ್ ಅವರ ‘ವಂದೇ ಮಾತರಂ’ ಗೀತೆಯಲ್ಲಿ ಹನಾಮ್ತೆ ಅವರು ಹಾಡಿದ್ದ ವಿಡಿಯೊವನ್ನು ಮಿಜೋರಾಂನ ಮಾಜಿ ಮುಖ್ಯಮಂತ್ರಿ ಜೋರಾಮ್‌ತಂಗಾ ಅವರು ಹಂಚಿಕೊಂಡಿದ್ದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರೂ ಹಂಚಿಕೊಂಡಿದ್ದರು.
2020ರಲ್ಲಿ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹಂಚಿಕೆಯಾಗಿತ್ತು. ಅಲ್ಲಿಂದ ಹನಾಮ್ತೆ ಪ್ರಖ್ಯಾತಿ ಪಡೆದರು. ನಂತರ ಅವರ ಪ್ರತಿ ವಿಡಿಯೊಗಳಿಗೂ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.