
ಐಜ್ವಾಲ್: ದೇಶದಲ್ಲಿ ಶುಂಠಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಿಜೋರಾಂ 'ಭಾರತದ ಶುಂಠಿ ರಾಜಧಾನಿ' ಎಂಬ ಸ್ಥಾನಮಾನ ಪಡೆಯಲಿದೆ.
ಸೋಮವಾರ ನವದೆಹಲಿಯಲ್ಲಿ ನಡೆದ ಸಮಾಲೋಚನಾಯಲ್ಲಿ ಸಭೆಯಲ್ಲಿ ಮಿಜೋರಾಂ ಅನ್ನು 'ಭಾರತದ ಶುಂಠಿ ರಾಜಧಾನಿ' ಎಂದು ಘೋಷಿಸಲು ನೀತಿ ಆಯೋಗ ಶಿಫಾರಸು ಮಾಡಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ನೀತಿ ಆಯೋಗ ಮತ್ತು ಮಿಜೋರಾಂ ಸರ್ಕಾರ ಜಂಟಿಯಾಗಿ ಆಯೋಜಿಸಿದ್ದವು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಲಾಲ್ದುಹೋಮ, ಕಳೆದ ಎರಡು ವರ್ಷಗಳಲ್ಲಿ ಮಿಜೋರಾಂ ಭಾರತದ ಪ್ರಮುಖ ಶುಂಠಿ ಉತ್ಪಾದಕ ರಾಜ್ಯಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ. ಶುಂಠಿ ಬೆಳೆಗಾರರು ಮತ್ತು ಹೂಡಿಕೆದಾರರನ್ನು ಬೆಂಬಲಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರವು, ಈಗ ಪ್ರತಿ ಕಿಲೋಗ್ರಾಂ ಶುಂಠಿಗೆ ಕನಿಷ್ಠ ₹50 ಬೆಂಬಲ ಬೆಲೆ ನೀಡುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.