ADVERTISEMENT

ಮಿಜೋರಾಂ: ಎರಡು ಗಂಟೆಗಳಲ್ಲಿ ಶೇ 15ರಷ್ಟು ಮತದಾನ

ಪಿಟಿಐ
Published 28 ನವೆಂಬರ್ 2018, 6:36 IST
Last Updated 28 ನವೆಂಬರ್ 2018, 6:36 IST
ಬುರು ಕ್ಷೇತ್ರದಲ್ಲಿ ಹಿರಿಯೊರಬ್ಬರು ಮತದಾನ ಮಾಡಿದರು
ಬುರು ಕ್ಷೇತ್ರದಲ್ಲಿ ಹಿರಿಯೊರಬ್ಬರು ಮತದಾನ ಮಾಡಿದರು   

ಐಜ್ವಾಲ್‌: ಮಿಜೋರಾಂನ 40 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಮತದಾನ ನಡೆಯುತ್ತಿದ್ದು, ಮೊದಲ ಎರಡು ಗಂಟೆಗೆ ಶೇ 15ರಷ್ಟು ಮತ ದಾಖಲಾಗಿದೆ.

ಬಿಗಿ ಭದ್ರತೆಯೊಂದಿಗೆ ಬೆಳಿಗ್ಗೆ 7ಗಂಟೆಗೆ ಮತದಾನ ಪ್ರಾರಂಭವಾಗಿದ್ದು, ಸಂಜೆ 4 ಗಂಟೆಗೆ ಪೂರ್ಣಗೊಳ್ಳಲಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಆಶಿಷ್ಕುಂದ್ರ ತಿಳಿಸಿದರು.

3.94 ಲಕ್ಷ ಮಹಿಳೆಯರ ಮತಗಳು ಸೇರಿ ಒಟ್ಟು 7.70 ಲಕ್ಷ ಮತಗಳು ಚುನಾವಣಾ ಕಣದಲ್ಲಿರುವ 209 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿವೆ.1998ರಿಂದ ಇಲ್ಲಿಯತನಕ ಕಾಂಗ್ರೆಸ್ ಪಕ್ಷದ ಲಾಲ್ಥಾನ್ಹಾವ್ಲಾ ಮುಖ್ಯಮಂತ್ರಿಯಾಗಿದ್ದಾರೆ. ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಲಾಲ್ಥಾನ್ಹಾವ್ಲಾ ಅದೃಷ್ಟವನ್ನೂ ಈ ಮತಗಳೇ ನಿರ್ಧರಿಸಲಿವೆ.

ADVERTISEMENT

2013ರಲ್ಲಿ ಒಂದೂ ಕ್ಷೇತ್ರವನ್ನು ಗೆಲ್ಲದ ಬಿಜೆಪಿ ಈ ಸಲ 39ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಮಿಜೋರಾಂ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದೆ. ಕಾಂಗ್ರೆಸ್ ಸತತ ಮೂರನೆಯ ಸಲ ಗೆದ್ದು ಹ್ಯಾಟ್ರಿಕ್ ಸಾಧಿಸೀತೇ ಅಥವಾ ರಾಜ್ಯಾಧಿಕಾರಮಿಜೋ ರಾಷ್ಟ್ರೀಯ ರಂಗಕ್ಕೆ (ಎಂ.ಎನ್.ಎಫ್.) ಒಲಿದೀತೇ ಎಂಬುದನ್ನುಮತದಾರರು ಇಂದು ನಿರ್ಧರಿಸಲಿದ್ದಾರೆ.

ಮತಗಟ್ಟೆ ಬಳಿ ಉದ್ದುದ್ದ ಸಾಲುಗಳಲ್ಲಿ ನಿಂತು ಜನ ಹುರುಪಿನಿಂದ ಮತದಾನ ಮಾಡುತ್ತಿದ್ದಾರೆ.ಎಂ.ಎನ್.ಎಫ್.ನಝೋರ್ಮತಂಗಾ ಅವರು ಐಜ್ವಾಲ್‌ ಉತ್ತರ ಕ್ಷೇತ್ರದಲ್ಲಿನ ರಾಮ್ಲುನ್‌ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು.

ಅಂತರ್‌ರಾಜ್ಯ ಗಡಿಯಲ್ಲಿರುವ ಮತದಾರರು ತಮ್ಮ ಮತಚಲಾಯಿಸಲು ಅರ್ಧ ಕಿ.ಮೀ ನಡೆದು ಬರಬೇಕಿದೆ. ಇದಕ್ಕಾಗಿಸ್ಥಳೀಯ ನಾಗರಿಕ ಸೊಸೈಟಿಯ ಸದಸ್ಯರು ಹಂದಿ ಕರಿಯನ್ನು ಉಣಬಡಿಸುವ ಮೂಲಕ ಅವರಿಗೆ ಸ್ವಾಗತಿಸುತ್ತಿದ್ದಾರೆ.

ಒಟ್ಟು 1,179 ಮತಗಟ್ಟೆಗಳಲ್ಲಿ 47 ಮತಗಟ್ಟೆಗಳನ್ನು ಅತಿಸೂಕ್ಷ್ಮಪ್ರದೇಶಗಳೆಂದು ಗುರುತಿಸಲಾಗಿದೆ. ಕೇಂದ್ರ ಸಶಸ್ತ್ರ ಪಡೆಯ 40 ತುಕಡಿಗಳು, ರಾಜ್ಯ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಮುಕ್ತ ಮತ್ತು ನ್ಯಾಯಯುತ ಮತದಾನಕ್ಕೆ ಅನುವು ಮಾಡಿಕೊಡಲಾಗಿದೆ.

ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರಿಗಾಗಿ ‘ಪಿಂಕ್ ಮತಗಟ್ಟೆ’ಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳ ಮತಗಟ್ಟೆ ಅಧಿಕಾರಿ ಮತ್ತು ಭದ್ರತಾ ಸಿಬ್ಬಂದಿ ಮಹಿಳೆಯೇ ಆಗಿರುತ್ತಾರೆ.

ಕಾಂಗ್ರೆಸ್ ಪಕ್ಷ 2008ರಲ್ಲಿ 32 ಮತ್ತು 2013ರಲ್ಲಿ 34ಸೀಟು ಗೆದ್ದಿತ್ತು.ಸರ್ಕಾರ ರಚಿಸಲು21ಸೀಟುಗಳ ಬಹುಮತ ಸಾಕು.ಈ ಸಲದ ಚುನಾವಣೆಯಲ್ಲಿ ಮುಖ್ಯವಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.ಕಾಂಗ್ರೆಸ್,ಬಿಜೆಪಿ,ಎಂ.ಎನ್.ಎಫ್.ಕಣದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.