ADVERTISEMENT

ಹಿಂದೂ–ಮುಸ್ಲಿಂ ನಡುವಿನ ಬೆಂಕಿಗೆ ಸಿಎಎ ತುಪ್ಪ ಸುರಿಯುತ್ತಿದೆ: ಕನ್ಹಯ್ಯ ಕುಮಾರ್

ಪಿಟಿಐ
Published 29 ಜನವರಿ 2020, 13:21 IST
Last Updated 29 ಜನವರಿ 2020, 13:21 IST
ಕನ್ಜಯ್ಯ ಕುಮಾರ್‌
ಕನ್ಜಯ್ಯ ಕುಮಾರ್‌   

ಔರಂಗಬಾದ್‌:‘ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಉರಿಯುತ್ತಿರುವಬೆಂಕಿಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಇನ್ನಷ್ಟು ತುಪ್ಪ ಸುರಿಯುತ್ತಿದೆ’ ಎಂದು ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಕನ್ಹಯ್ಯ ಕುಮಾರ್ ಟೀಕಿಸಿದರು.

ಮಹಾರಾಷ್ಟ್ರದ ಪತೇರಿಯಲ್ಲಿ ನಡೆದ ಸಿಎಎ ವಿರೋಧಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮೋದಿ ಮತ್ತು ಅಮಿತ್‌ ಶಾ ಗುಜರಾತ್‌ ಚುನಾವಣೆ ಸಂದರ್ಭದಲ್ಲಿ ಹಿಂದೂ, ಮುಸ್ಲಿಮರ ನಡುವೆ ಸಂಘರ್ಷ ಸೃಷ್ಟಿಸುತ್ತಿದ್ದರು. ಈಗ ದೇಶದ ವಿಷಯದಲ್ಲೂ ಆ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ಜನರು ಈ ಧಾರ್ಮಿಕ ಸಂಘರ್ಷವನ್ನು ಪಕ್ಕಕ್ಕಿಟ್ಟು, ದೇಶದಲ್ಲಿನ ನಿರುದ್ಯೋಗ ಹಾಗೂ ಕುಗ್ಗಿರುವ ಆರ್ಥಿಕತೆ ಬಗ್ಗೆ ಸರ್ಕಾರವನ್ನು ಪ್ರಶ್ನಿಸಬೇಕು. ಆದರೆ,ಯಾರಾದರೂ ದೇಶದಲ್ಲಿರುವ ಸಮಸ್ಯೆಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದರೆ, ಪ್ರತಿಯಾಗಿ ಆತನ ಪೌರತ್ವದ ಬಗ್ಗೆ ಕೇಳಲಾಗುತ್ತಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.