ADVERTISEMENT

Modi in Maldives | ಮಾಲ್ದೀವ್ಸ್‌ಗೆ ₹4,850 ಕೋಟಿ ಲೈನ್‌ ಆಫ್‌ ಕ್ರೆಡಿಟ್ ಘೋಷಣೆ

ದ್ವೀಪ ರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ, ಅಧ್ಯಕ್ಷ ಮುಯಿಝು ಜತೆ ಮಾತುಕತೆ

ಪಿಟಿಐ
Published 25 ಜುಲೈ 2025, 15:40 IST
Last Updated 25 ಜುಲೈ 2025, 15:40 IST
ಮಾಲ್ದೀವ್ಸ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಲ್ಲಿನ ಅಧ್ಯಕ್ಷ ಮೊಹಮದ್‌ ಮುಯಿಝು ಅವರು ಸ್ವಾಗತಿಸಿದರು –ಎಎಫ್‌ಪಿ ಚಿತ್ರ
ಮಾಲ್ದೀವ್ಸ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಲ್ಲಿನ ಅಧ್ಯಕ್ಷ ಮೊಹಮದ್‌ ಮುಯಿಝು ಅವರು ಸ್ವಾಗತಿಸಿದರು –ಎಎಫ್‌ಪಿ ಚಿತ್ರ   

ಮಾಲೆ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಪ್ರವಾಸಕ್ಕಾಗಿ ಶುಕ್ರವಾರ ಮಾಲ್ದೀವ್ಸ್‌ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಜುಲೈ 26ರಂದು ನಡೆಯಲಿರುವ ದೇಶದ 60ನೇ ಸ್ವಾತಂತ್ರ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧ್ಯಕ್ಷ ಮೊಹಮದ್‌ ಮುಯಿಝು ಅವರು ಸ್ವಾಗತಿಸಿದರು. ಈ ವೇಳೆ ಮಕ್ಕಳು ಸಾಂಪ್ರದಾಯಿಕ ನೃತ್ಯ ಮಾಡಿದರು. ಉಭಯ ದೇಶಗಳ ನಾಯಕರು ವ್ಯಾಪಾರ, ರಕ್ಷಣೆ ಮತ್ತು ಮೂಲಸೌಕರ್ಯ ಸಹಕಾರ ಕೇಂದ್ರೀಕೃತ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು.

ನಂತರ ನರೇಂದ್ರ ಮೋದಿ ಅವರು, ‘ಭಾರತವು ಮಾಲ್ದೀವ್ಸ್‌ಗೆ ₹4,850 ಕೋಟಿ (565 ಮಿಲಿಯನ್ ಡಾಲರ್‌) ಲೈನ್‌ ಆಫ್‌ ಕ್ರೆಡಿಟ್‌ (ವಿಸ್ತರಿಸಿದ ಸಾಲದ ಮೊತ್ತ) ನೀಡಲು ನಿರ್ಧರಿಸಿದೆ’ ಎಂದು ಘೋಷಿಸಿದರು.

ADVERTISEMENT

ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಮತ್ತು ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಉಭಯ ದೇಶಗಳು ಮಾತುಕತೆ ನಡೆಸುತ್ತಿವೆ ಎಂದು ತಿಳಿಸಿದರು.

ರಕ್ಷಣೆ ಮತ್ತು ಭದ್ರತಾ ಕ್ಷೇತ್ರಗಳಲ್ಲಿನ ಪರಸ್ಪರ ಸಹಕಾರವು ಉಭಯ ದೇಶಗಳ ನಡುವಣ ವಿಶ್ವಾಸಕ್ಕೆ ಸಾಕ್ಷಿ. ಮಾಲ್ದೀವ್ಸ್‌ನ ರಕ್ಷಣಾ ಸಾಮರ್ಥ್ಯವನ್ನು ಬಲಿಷ್ಠಗೊಳಿಸಲು ಭಾರತ ಎಂದಿಗೂ ಬೆಂಬಲ ನೀಡುತ್ತದೆ ಎಂದು ಭರವಸೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.