ADVERTISEMENT

'ಏಕತೆಗಾಗಿ ಓಟ'ದಲ್ಲಿ ಭಾಗವಹಿಸಲು ಮೋದಿ ಕರೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 10:33 IST
Last Updated 28 ಅಕ್ಟೋಬರ್ 2018, 10:33 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ:ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗುವ ರನ್ ಫಾರ್ ಯೂನಿಟಿ (ಏಕತೆಗಾಗಿ ಓಟ)ದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಳ್ಳಬೇಕು ಎಂದುಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ,

ಈ ತಿಂಗಳ ಮನದ ಮಾತು ರೇಡಿಯೊ ಕಾರ್ಯಕ್ರಮದಲ್ಲಿ ಮೋದಿ ಈ ಕರೆ ನೀಡಿದ್ದಾರೆ. ಉಕ್ಕಿನ ಮನುಷ್ಯ ಪಟೇಲ್ ಅವರ ಜನ್ಮ ದಿನಾಚರಣೆ ಅಕ್ಟೋಬರ್ 31ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಏಕತೆಗಾಗಿ ಓಟ ನಡೆಯಲಿದೆ.ಈ ಓಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೇಶದ ನಾಗರಿಕರು ಭಾಗಿಯಾಗಬೇಕು ಎಂದು ಮೋದಿ ಹೇಳಿದ್ದಾರೆ.ಅದೇ ದಿನ ಜಗತ್ತಿನ ಅತೀ ದೊಡ್ಡ ಪ್ರತಿಮೆ ಎಂದು ಹೆಗ್ಗಳಿಕೆ ಪಡೆದಿರು ಪಟೇಲ್ ಅವರ ಪ್ರತಿಮೆ ಅನಾವರಣಗೊಳ್ಳಲಿದೆ.ಅಮೆರಿಕದ ದಿ ಸ್ಟ್ಯಾಚ್ಯೂ ಆಫ್ ಲಿಬರ್ಟಿಗಿಂತಲೂ ದೊಡ್ಡದಾದ ಪ್ರತಿಮೆ ಇದು ಎಂದಿದ್ದಾರೆ ಮೋದಿ.

ಮೋದಿ ಮನದ ಮಾತು ಹೈಲೈಟ್ಸ್

ADVERTISEMENT

ಜೈವಿಕ ಕೃಷಿಗೆ ಒಲವು ತೋರಿಸಿರುವ ಈಶಾನ್ಯ ಭಾರತದ ಜನರನ್ನು ಶ್ಲಾಘಿಸಿದ ಮೋದಿ, ಈಶಾನ್ಯ ರಾಜ್ಯಗಳು ಪ್ರಕೃತಿ ಸೌಂದರ್ಯದಿಂದ ಕೂಡಿದ್ದು ಅಲ್ಲಿನ ಜನರು ಪ್ರತಿಭಾವಂತರು, ಕೆಲವು ದಿನಗಳ ಹಿಂದೆ ಸಿಕ್ಕಿಂ ಫ್ಯೂಚರ್ ಪಾಲಿಸಿ ಗೋಲ್ಡ್ ಅವಾರ್ಡ್ 2018 ಗೆದ್ದುಕೊಂಡಿತ್ತು.


ನವೆಂಬರ್ 11 ರಂದು ವಿಶ್ವ ಮಹಾಯುದ್ಧ ಅಂತ್ಯಗೊಂಡ ನೂರನೇ ವರ್ಷಾಚರಣೆ, ಈ ಯುದ್ಧದಲ್ಲಿ ಭಾರತೀಯ ಸೈನಿಕರೂ ಭಾಗಿಯಾಗಿದ್ದರು.ಅವರು ಧೈರ್ಯದಿಂದ ಹೋರಾಡಿದ್ದಾರೆ.

ಜಕಾರ್ತಾದಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್ ಪಂದ್ಯಗಳಲ್ಲಿ ಭಾಗವಹಿಸಿದವರನ್ನು ಭೇಟಿಯಾಗಿದ್ದು ನನ್ನ ಸೌಭಾಗ್ಯ, 72 ಪದಕಗಳನ್ನು ಗೆದ್ದು ಪ್ಯಾರಾ ಒಲಿಂಪಿಕ್ಸ್ ನಲ್ಲಿ ದಾಖಲೆ ಸೃಷ್ಟಿಸಿದ ಕ್ರೀಡಾಪಟುಗಳಿಗೆ ಅಭಿನಂದನೆಗಳು.


ಭುವನೇಶ್ವರದಲ್ಲಿ ನಡೆಯಲಿರುವ ವಿಶ್ವ ಕಪ್ ಹಾಕಿ ಪಂದ್ಯದಲ್ಲಿ ಕ್ರೀಡಾಪಟುಗಳು ದೇಶದ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.