ನವದೆಹಲಿ: ದೇಶದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಳಕಿನ ಹಬ್ಬ ದೀಪಾವಳಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಶನಿವಾರ ಟ್ವೀಟ್ ಮಾಡಿರುವ ಅವರು ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಈ ಹಬ್ಬವು ಎಲ್ಲರ ಬಾಳಿನಲ್ಲಿ ಮತ್ತಷ್ಟು ಬೆಳಕು ಹಾಗೂ ಸಂತೋಷವನ್ನು ನೀಡಲಿ. ದೇವರು ಎಲ್ಲರಿಗೂ ಸಮೃದ್ಧಿ ಹಾಗೂ ಆರೋಗ್ಯವನ್ನು ನೀಡಲಿ ಎಂದು ಆಶಿಸುತ್ತೇನೆಂದು ಮೋದಿ ಹೇಳಿದ್ದಾರೆ.
ಶುಕ್ರವಾರ ಕೂಡ ಟ್ವೀಟ್ ಮಾಡಿದ್ದ ನರೇಂದ್ರ ಮೋದಿ ಈ ಸಲ ದೀಪಾವಳಿ ಹಬ್ಬದ ದಿನದಂದು ದೇಶದ ಗಡಿ ಕಾಯುತ್ತಿರುವ ಯೋಧರಿಗೆ ಸೆಲ್ಯೂಟ್ ಹೊಡೆಯಲು ದೀಪಗಳನ್ನು ಬೆಳಗಿಸಿ ಎಂದು ಹೇಳಿದ್ದರು.
ಧೈರ್ಯದಿಂದ ದೇಶದ ಗಡಿ ಕಾಯುತ್ತಿರುವ ನಮ್ಮ ವೀರ ಯೋಧರನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅವರ ಕುಟುಂಬಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದು ಮೋದಿ ಟ್ವೀಟ್ ಮಾಡುವ ಮೂಲಕ ವಿಡಿಯೊವೊಂದನ್ನು ಹಂಚಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.