
ಪಿಟಿಐ
ಅಗರ್ತಲಾ: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಉಭಯ ದೇಶಗಳ ನಡುವಿನ ಅಗರ್ತಲಾ– ಅಖೌರಾ ರೈಲ್ವೆ ಯೋಜನೆಗೆ ಬುಧವಾರ ವರ್ಚುವಲ್ ಆಗಿ ಹಸಿರು ನಿಶಾನೆ ತೋರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
15 ಕಿ.ಮೀ ಉದ್ದದ ರೈಲು ಯೋಜನೆಯು (ಭಾರತದಲ್ಲಿ 5 ಕಿ.ಮೀ ಮತ್ತು ಬಾಂಗ್ಲಾದಲ್ಲಿ 10 ಕಿ.ಮೀ) ಉಭಯ ರಾಷ್ಟ್ರಗಳ ನಡುವಣ ವಾಣಿಜ್ಯ ಚಟುವಟಿಕೆಗೆ ಉತ್ತೇಜನ ನೀಡಲಿದೆ ಮತ್ತು ಢಾಕಾ ಮೂಲಕ ಅರ್ಗತಲಾ–ಕೋಲ್ಕತ್ತ ನಡುವಣ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ ಎಂದು ಹೇಳಿದರು.
ಸದ್ಯ ರೈಲಿನಲ್ಲಿ ಕೋಲ್ಕತ್ತದಿಂದ ಅಗರ್ತಲಾಕ್ಕೆ ತೆರಳಲು 31 ಗಂಟೆ ಹಿಡಿಯುತ್ತಿದೆ. ನೂತನ ಯೋಜನೆಯಿಂದ 10 ಗಂಟೆ ಕಡಿಮೆಯಾಗಲಿದೆ ಎಂದರು.
ಯೋಜನೆಗೆ ಭಾರತದ ರೈಲ್ವೆ ಸಚಿವಾಯಲವು ತನ್ನ ಬಜೆಟ್‌ನಲ್ಲಿ ₹153.84 ಕೋಟಿ ಮೀಸಲಿಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.