ಕೇಸರಿ ಪೇಟ ಧರಿಸಿರುವ ಪ್ರಧಾನಿ ಮೋದಿ
ಪಿಟಿಐ ಚಿತ್ರ
ನವದೆಹಲಿ: ಸತತ 12ನೇ ಬಾರಿಗೆ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ನೆರವೇರಿಸಿರುವ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಬಿಳಿ ಕುರ್ತಾ, ಕೇಸರಿ ಬಂಧ್‌ಗಲಾ ಜಾಕೆಟ್ ಮತ್ತು ಕೇಸರಿ ಬಣ್ಣದ ಪೇಟವನ್ನು ಧರಿಸಿದ್ದರು.
ಪ್ರತಿ ವರ್ಷ ಮೋದಿ, ಸ್ವಾತಂತ್ರ್ಯ ದಿನದಂದು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಪೇಟಗಳನ್ನು ಧರಿಸುತ್ತಾರೆ.
ಕಳೆದ ವರ್ಷ, ಕಿತ್ತಳೆ, ಹಳದಿ ಮತ್ತು ಹಸಿರು ಬಣ್ಣಗಳಿಂದ ಕೂಡಿದ್ದ ರಾಜಸ್ಥಾನಿ ಲೆಹೆರಿಯಾ ಪೇಟವನ್ನು ಧರಿಸಿದ್ದರು. ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ವಸ್ತ್ರದ ಸಂಕೇತವಾಗಿದೆ.
2014ರಲ್ಲಿ ಮೊದಲ ಬಾರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸುವ ಸಂದರ್ಭದಲ್ಲಿ ಕೆಂಪು ಜೋಧಪುರಿ ಬಂದೇಜ್ ಪೇಟವನ್ನು ಧರಿಸಿದ್ದರು.
2023ರಲ್ಲಿ ಬಂಧನಿ ಮುದ್ರಣದ ಪೇಟ, 2022ರಲ್ಲಿ ನೆಹರೂ ಜಾಕೆಟ್ ಮತ್ತು ತ್ರಿವರ್ಣದ ಪೇಟ, 2021ರಲ್ಲಿ ಕೆಂಪು ಮತ್ತು ಗುಲಾಬಿ ಮಿಶ್ರಿತ ಪೇಟ, 2020ರಲ್ಲಿ ಕೇಸರಿ ಮತ್ತು ಕೆನೆ ಬಣ್ಣ ಮಿಶ್ರಿತ ಪೇಟವನ್ನು ಧರಿಸಿದ್ದರು. ಹೀಗೆ ಪ್ರತಿ ವರ್ಷವೂ ವಿಭಿನ್ನ ರೀತಿಯ ಪೇಟ ಧರಿಸಿ ಮೋದಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.