ADVERTISEMENT

ರಾಜ್ಯದ ರೈತರೊಂದಿಗೆ ಕನ್ನಡದಲ್ಲಿ ಮಾತನಾಡಿದ ಮೋದಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 12:40 IST
Last Updated 20 ಜೂನ್ 2018, 12:40 IST
   

ನವದೆಹಲಿ: ಕಮಲಮ್ಮ ನೀವು ಹೇಗಿದ್ದೀರಿ? ನಿಮ್ಮ ಊರಿನಲ್ಲಿ ಎಲ್ಲರೂ ಕ್ಷೇಮವಾಗಿದ್ದೀರಾ? ನಮೋ ಆ್ಯಪ್ ಲೈವ್ ವಿಡಿಯೊ ಮೂಲಕ ಕರ್ನಾಟಕದ ರೈತರೊಂದಿಗೆ ಸಂವಾದ ನಡೆಸಿದ ನರೇಂದ್ರ ಮೋದಿಕನ್ನಡ ಮಾತನಾಡಿದಾಗ ರೈತರ ಮುಖದಲ್ಲಿ ಖುಷಿಯ ಅಲೆ.

ರಾಮನಗರ ಜಿಲ್ಲೆಯ ಕರ್ನಾಟಕ ಕೃಷಿ ವಿಕಾಸ ಕೇಂದ್ರದಲ್ಲಿ ಕುಳಿತು ರೈತರು ಮೋದಿ ಜತೆ ಲೈವ್ ವಿಡಿಯೊ ಸಂವಾದ ನಡೆಸಿದ್ದಾರೆ.

ಕಮಲಮ್ಮ ಎಂಬ ರೈತ ಮಹಿಳೆ ಮೋದಿ ಜತೆ ಮಾತು ಆರಂಭಿಸಿದಾಗ, ಮೋದಿ ಕನ್ನಡದಲ್ಲಿ ಮಾತನಾಡಿದ್ದಾರೆ. ರೈತರು ಕನ್ನಡದಲ್ಲಿ ಮಾತನಾಡಿದ್ದನ್ನು ಅಲ್ಲಿದ್ದ ಇನ್ನೊಬ್ಬ ವ್ಯಕ್ತಿ ಹಿಂದಿಯಲ್ಲಿ ಅನುವಾದ ಮಾಡುತ್ತಿದ್ದರು.

ADVERTISEMENT

ಇನ್ನೊಬ್ಬ ರೈತ ಮಾತನಾಡಿದಾಗ, ನೀವು ಹೇಗಿದ್ದೀರಾ? ನಿಮ್ಮ ಕೃಷಿ ಕೆಲಸಗಳು ಹೇಗಿವೆ? ಎಂದು ಕೇಳಿದ್ದಾರೆ ಮೋದಿ.

ಕರ್ನಾಟಕ ವಿಧಾನಸಭಾಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದಮೋದಿ ತಮ್ಮ ಭಾಷಣವನ್ನು ಕನ್ನಡದಲ್ಲೇ ಆರಂಭಿಸುತ್ತಿದ್ದರು. ಹುಬ್ಬಳ್ಳಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ವರಕವಿ ಬೇಂದ್ರೆಯವರನ್ನು ವಾರಕವಿ ಬೇಂದ್ರೆ ಎಂದು ಹೇಳಿ, ಕುರುಡು ಕಾಂಚಣ ಕುಣಿಯುತ್ತಲಿತ್ತು, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು...’ಕವನವನ್ನು ಪ್ರಯಾಸದಿಂದ ವಾಚಿಸಿದ್ದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.

ಪ್ರಧಾನಿ ಅವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದ ರಾಮನಗರ ಜಿಲ್ಲೆಯ ರೈತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.