ADVERTISEMENT

ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳವನ್ನು ನಾಶ ಮಾಡಿದ್ದಾರೆ: ಪ್ರಧಾನಿ ಮೋದಿ

ಪಿಎಂ–ಕಿಸಾನ್‌ ಯೋಜನೆ ಲಾಭದಿಂದ ಪಶ್ಚಿಮ ಬಂಗಾಳ ರೈತರು ವಂಚಿತ: ಟೀಕೆ

ಪಿಟಿಐ
Published 25 ಡಿಸೆಂಬರ್ 2020, 10:49 IST
Last Updated 25 ಡಿಸೆಂಬರ್ 2020, 10:49 IST
ನರೇಂದ್ರ ಮೋದಿ (ಪಿಟಿಐ ಚಿತ್ರ)
ನರೇಂದ್ರ ಮೋದಿ (ಪಿಟಿಐ ಚಿತ್ರ)   

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

ಆನ್‌ಲೈನ್‌ ಮೂಲಕ ನಡೆದ ಪಿಎಂ–ಕಿಸಾನ್‌ ಯೋಜನೆಯ ಫಲಾನುಭವಿಗಳಿಗೆ ಧನಸಹಾಯ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರತಿಯೊಬ್ಬ ರೈತನಿಗೆಪ್ರತಿ ವರ್ಷ ₹ 6,000 ನೀಡುವ ಕೇಂದ್ರದ ಪಿಎಂ–ಕಿಸಾನ್‌ ಯೋಜನೆಯನ್ನು ಮಮತಾ ಬ್ಯಾನರ್ಜಿ ಸರ್ಕಾರ ಜಾರಿಗೊಳಿಸದ ಕಾರಣ ಪಶ್ಚಿಮ ಬಂಗಾಳದ 70 ಲಕ್ಷ ರೈತರಿಗೆ ಈ ಲಾಭ ಸಿಗದಂತಾಗಿದೆ. ಮಮತಾ ಅವರು ಪಶ್ಚಿಮ ಬಂಗಾಳವನ್ನು ನಾಶಗೊಳಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಪ್ರತಿ ರೈತಗೆ ಪ್ರತಿ ವರ್ಷ ₹ 6,000 ನೀಡುವ ಕೇಂದ್ರದ ಪಿಎಂ–ಕಿಸಾನ್‌ ಯೋಜನೆಯನ್ನು ಜಾರಿಗೊಳಿಸದ ಕಾರಣ ರಾಜ್ಯದ 70 ಲಕ್ಷ ರೈತರಿಗೆ ಈ ಲಾಭ ಸಿಗದಂತೆ ಮಾಡಿದ್ದಾರೆ’ ಎಂದು ಟೀಕಿಸಿದರು.

‘ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಆದರೆ, ರೈತ ಪರವಾದ ಪಿಎಂ–ಕಿಸಾನ್‌ ಯೋಜನೆಯನ್ನು ಜಾರಿಗೊಳಿಸದ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ನಿರ್ಧಾರ ವಿರುದ್ಧ ಯಾವುದೇ ಪ್ರತಿಭಟನೆ ನಡೆಯದಿರುವುದು ಅಚ್ಚರಿ ಮೂಡಿಸುತ್ತದೆ’ ಎಂದು ಹೇಳಿದರು.

‘ಇಡೀ ದೇಶವೇ ಪಿಎಂ–ಕಿಸಾನ್‌ ಯೋಜನೆಯ ಲಾಭ ಪಡೆಯುತ್ತಿದ್ದರೆ, ಈ ಯೋಜನೆಯನ್ನು ಅನುಷ್ಠಾನಗೊಳಿಸದ ಏಕೈಕ ರಾಜ್ಯವೆಂದರೆ ಪಶ್ಚಿಮ ಬಂಗಾಳ’ ಎಂದರು.

‘ಪಶ್ಚಿಮ ಬಂಗಾಳದ 23 ಲಕ್ಷ ರೈತರು ಈ ಯೋಜನೆಯಡಿ ಧನಸಹಾಯಕ್ಕಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ, ರಾಜ್ಯ ಸರ್ಕಾರ ಈ ಅರ್ಜಿಗಳ ಪರಿಶೀಲನೆಯನ್ನೇ ನಿಲ್ಲಿಸಿತು’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.