ನವದೆಹಲಿ: ಪ್ರಧಾನಿ ಮೋದಿಯವರ 62ನೇ 'ಮನ್ ಕಿ ಬಾತ್ ' ಕಾರ್ಯಕ್ರಮ ಇಂದು ಆಲ್ ಇಂಡಿಯಾ ರೇಡಿಯೋದಲ್ಲಿ 11 ಗಂಟೆಗೆ ಪ್ರಸಾರವಾಗಲಿದೆ.
ಜನವರಿ 26ರಂದು ಅವರ 'ಮನ್ ಕಿ ಬಾತ್ ' ಕಾರ್ಯಕ್ರಮ ಪ್ರಸಾರವಾಗಿತ್ತು.ಅಂದು ರಾಷ್ಟ್ರದ ಜನತೆ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಎಲ್ಲಾ ಸಮಸ್ಯೆಗಳಿಗೂ ಹಿಂಸಾಚಾರವೇ ಪರಿಹಾರವಲ್ಲ,ಹಲವು ವರ್ಷಗಳಿಂದ ದೇಶ ಎದುರಿಸುತ್ತಿದ್ದ ವಲಸಿಗರ ಸಮಸ್ಯೆಯನ್ನು ಪರಿಹರಿಸಲಾಗಿದೆ.ಇದಕ್ಕಾಗಿ ಸರ್ಕಾರ 600 ಕೋಟಿ ವೆಚ್ಚ ಮಾಡುತ್ತಿದೆ ಎಂದು ಹೇಳಿದ್ದರು.
ಇದನ್ನೂ ಓದಿ:ಮನ್ ಕಿ ಬಾತ್: ಹಿಂಸೆ ಯಾವುದಕ್ಕೂ ಪರಿಹಾರವಲ್ಲ ಎಂದ ಪ್ರಧಾನಿ ಮೋದಿ
ನೀರು ಸಂರಕ್ಷಿಸುವ ಕುರಿತು ಜನರು ವಿಡಿಯೋ, ಚಿತ್ರಗಳನ್ನು ಶೇರ್ ಮಾಡಿ, '#jalshakti4india' ಎಂಬ ಹ್ಯಾಶ್ ಟ್ಯಾಗ್ ಮೂಲಕ ಅಭಿಯಾನ ಕೈಗೊಳ್ಳಬೇಕು ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.