ADVERTISEMENT

ಮೋದಿ ಬಳಸಿದ ‘ಆಂದೋಲನ ಜೀವಿʼ ಪದ ವೈರಲ್‌: ಕಾಂಗ್ರೆಸ್‌, ಬಿಜೆಪಿ ಬೆಂಬಲಿಗರ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 13:41 IST
Last Updated 8 ಫೆಬ್ರುವರಿ 2021, 13:41 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾಜ್ಯಸಭೆಯಲ್ಲಿ ‘ಆಂದೋಲನ ಜೀವಿಗಳುʼ ಎಂಬ ಪದವನ್ನು ಬಳಕೆ ಮಾಡಿದ್ದು, ಇದು ಟ್ವಿಟರ್‌ನಲ್ಲಿ ಟ್ರೆಂಡ್‌ ಆಗುವ ಮೂಲಕ ಪರ ಮತ್ತು ವಿರೋಧ ಚರ್ಚೆಗೆ ವೇದಿಕೆಯಾಗಿದೆ.

ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದಲ್ಲಿ ಹೊಸ ಸಮುದಾಯವೊಂದು ಹುಟ್ಟಿಕೊಂಡಿದೆ. ಅವರೇ ‘ಆಂದೋಲನ ಜೀವಿಗಳು’. ಇವರನ್ನು ನಾವು ಎಲ್ಲ ರೀತಿಯ ಪ್ರತಿಭಟನೆಯಲ್ಲಿ ಗುರುತಿಸಬಹುದು. ವಿದ್ಯಾರ್ಥಿಗಳು, ವಕೀಲರು, ಕಾರ್ಮಿಕರು ಹೀಗೆಯಾರೇ ಪ್ರತಿಭಟನೆ ಮಾಡಿದರೂ ಅವರು ಅಲ್ಲಿ ಇರುತ್ತಾರೆ. ಇಂತಹವರಿಂದ ದೇಶವನ್ನು ರಕ್ಷಿಸಬೇಕಿದೆ. ಆಂದೋಲನ ಜೀವಿಗಳಿಗೆ ಪ್ರತಿಭಟನೆಗಳು ನಡೆಯದಿದ್ದರೆ ಅವರು ಜೀವಿಸಲಾರರು ಎಂದು ವ್ಯಂಗ್ಯವಾಡಿದ್ದಾರೆ.

ADVERTISEMENT

ದೇಶವು ಪ್ರಗತಿಯ ಹಾದಿಯಲ್ಲಿದ್ದು ನಾವು ಎಫ್‌ಡಿಐ( ವಿದೇಶಿ ನೇರ ಬಂಡವಾಳ) ಕುರಿತು ಮಾತನಾಡುತ್ತಿದ್ದೇವೆ. ಆದರೆ ಈಗ ಹೊಸ ಎಫ್‌ಡಿಐ ಮುನ್ನೆಲೆಗೆ ಬಂದಿದೆ. ಅದುವೆ ಫಾರಿನ್‌ ಡಿಸ್ಟ್ರಕ್ಟಿವ್‌ ಐಡಿಯಾಲಜಿ (ಎಫ್‌ಡಿಐ–ವಿದೇಶಿ ವಿನಾಶಕಾರಿ ಸಿದ್ಧಾಂತ). ಇದರಿಂದಲೂ ಕೂಡ ನಾವು ದೇಶವನ್ನು ರಕ್ಷಿಸಿಕೊಳ್ಳಬೇಕಿದೆ ಎಂದು ಮೋದಿ ಹೇಳಿದ್ದಾರೆ.

ಮೋದಿ ಬಳಸಿದ ‘ಆಂದೋಲನ ಜೀವಿಗಳು’ಪದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಬಿಜೆಪಿ ಹಾಗೂ ಕಾಂಗ್ರೆಸ್‌ ಬೆಂಬಲಿಗರ ನಡುವಿನ ಕೆಸರೆರಚಾಟಕ್ಕೆ ಕಾರಣವಾಗಿದೆ. ಈ ಕುರಿತು ಪರ ಮತ್ತು ವಿರೋಧದ ಕೆಲವು ಸ್ವಾರಸ್ಯಕರ ಟ್ವೀಟ್‌ಗಳು ಇಲ್ಲಿವೆ.

ಬ್ರಿಟಿಷರು ಕೂಡ ಆಂದೋಲನಜೀವಿಗಳನ್ನು ವಿರೋಧಿಸುತ್ತಿದ್ದರು. ಸಾರ್ವಕರ್‌ ಗ್ಯಾಂಗ್‌ ಕೂಡ #ಆಂದೋಲನಜೀವಿಗಳು ಅಲ್ಲವೇ?

#ಆಂದೋಲನಜೀವಿಗಳಿಗೆ ನಾಚಿಕೆಯಾಗಬೇಕು

ಈ ದಿನದ #ಆಂದೋಲನಜೀವಿಗಳು

ವಾಜಪೇಯಿ ಕೂಡ ಎತ್ತಿನ ಬಂಡಿಯಲ್ಲಿ ಸಂಸತ್ತಿಗೆ ಮುತ್ತಿಗೆ ಹಾಕುವ ಮೂಲಕ #ಆಂದೋಲನಜೀವಿಯಾಗಿದ್ದರು.

ಆಕ್ಸ್ ಫರ್ಡ್ ವಿಶ್ವವಿದ್ಯಾಲಯ #ಆಂದೋಲನಜೀವಿ ಪದದ ಅರ್ಥವನ್ನು ಹುಡುಕುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.