ADVERTISEMENT

ಮೋದಿ ಮತ್ತೆ ಪ್ರಧಾನಿ ಆಗಲ್ಲ, ಮಹಾರಾಷ್ಟ್ರದಲ್ಲಿ ಬಿಜೆಪಿ ಬರಲ್ಲ: ಶರದ್‌ ಪವಾರ್‌

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 10:34 IST
Last Updated 23 ಅಕ್ಟೋಬರ್ 2018, 10:34 IST
   

ಮುಂಬೈ: 2019ರಲ್ಲಿ ಕೇಂದ್ರದಲ್ಲಿ ಸರ್ಕಾರ ಬದಲಾಗಲಿದ್ದು ನರೇಂದ್ರ ಮೋದಿ ಮತ್ತೆಪ್ರಧಾನ ಮಂತ್ರಿ ಆಗಲಾರರು ಎಂದು ನ್ಯಾಷನಲ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಅಧ್ಯಕ್ಷ ಶರದ್‌ ಪವಾರ್‌ ತಿಳಿಸಿದ್ದಾರೆ.

ಇಂಡಿಯಾ ಟುಡೆ ಸುದ್ದಿವಾಹಿನಿಯ ‘ಮುಂಬೈಮಂಥನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

2019ರಲ್ಲಿ ಬಹುತೇಕ ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ಸರ್ಕಾರ ಬದಲಾಗಲಿದೆ ಎಂದು ಅವರು ಭವಿಷ್ಯ ನುಡಿದರು. ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನುಗಮನಿಸಿದರೆ 2004ರಲ್ಲಿ ಇದ್ದಂತಹ ಪರಿಸ್ಥಿಯೇ ಇದೆ, ಯಾವುದೇ ಪಕ್ಷ ಕೂಡ ಸ್ಪಷ್ಟ ಬಹುಮತ ಪಡೆಯುವುದಿಲ್ಲ.

ADVERTISEMENT

2004ರಲ್ಲಿ ಯಾವುದೇ ಪಕ್ಷಕ್ಕೂಬಹುಮತ ಬಂದಿರಲಿಲ್ಲ ಆದರೆ ಮನಮೋಹನ್ ಸಿಂಗ್‌ ನೇತೃತ್ವದಲ್ಲಿ ಸರ್ಕಾರ ಹತ್ತು ವರ್ಷಗಳ ಕಾಲನಡೆಯಿತು ಎಂದರು. ಬಿಜೆಪಿ ಪಕ್ಷ 2004ರಲ್ಲಿಅಟಲ್ ಬಿಹಾರಿ ವಾಜಪೇಯಿನೇತೃತ್ವದಲ್ಲಿಭಾರತ ಪ್ರಕಾಶಿಸುತ್ತಿದೆ ಎಂಬ ಘೋಷ ವಾಕ್ಯದ ಅಡಿಯಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿತ್ತು. ಆದರೆ ಅಧಿಕಾರ ಹಿಡಿಯುವಲ್ಲಿ ವಿಫಲವಾಯಿತು ಎಂದು ಶರದ್ ಪವಾರ್ ಹೇಳಿದರು.

ನಂತರ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಿತು, 2014ರವರೆಗೂ ಮನಮೋಹನ್ ಸಿಂಗ್‌ ಯಶಸ್ವಿಯಾಗಿ ಸರ್ಕಾರ ನಡೆಸಿದರು. ಆದರೆ ಅಂದು ವಿರೋಧ ಪಕ್ಷದಲ್ಲಿ ನರೇಂದ್ರ ಮೋದಿ ಇದ್ದರೆ ಎಂದು ಶರದ್ ಪವಾರ್ಪ್ರಶ್ನೆ ಮಾಡಿದರು. 2004ರಲ್ಲಿ ವಾಜಪೇಯಿ ಅವರನ್ನು ಪ್ರಧಾನಿ ಎಂದು ಬಿಂಬಿಸಲಾಗಿತ್ತು, ಆಗ ಬಿಜೆಪಿಯವರು ವಾಜಪೇಯಿ ಬಿಟ್ಟರೆ ಪರ್ಯಾಯ ನಾಯಕರು ಇಲ್ಲ ಎಂದು ಹೇಳಿದ್ದರು.

ಅಂದಿನ ವಾಜಪೇಯಿ ನಾಯಕತ್ವಕ್ಕೂ ಇಂದಿನ ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಹೋಲಿಕೆ ಮಾಡಿದರೆ, ನನ್ನ ಪ್ರಕಾರ ಬಿಜೆಪಿಯಲ್ಲಿ ವಾಜಪೇಯಿ ಅತಿ ದೊಡ್ಡ ನಾಯಕರು, ಅಂದಿನನಾಯಕತ್ವ ಈಗ ಬಿಜೆಪಿಯಲ್ಲಿ ಇಲ್ಲ ಎಂದು ಅವರು ಹೇಳಿದರು.

2004ರಲ್ಲಿ ಮನಮೋಹನ್‌ ಸಿಂಗ್ ಪ್ರಧಾನಿಯಾಗುತ್ತಾರೆ ಎಂದು ಯಾರೂ ಸಹ ನಿರೀಕ್ಷೆ ಮಾಡಿರಲಿಲ್ಲ, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು, ಪರಿಸ್ಥಿತಿಗೆ ತಕ್ಕಂತೆ ನಾಯಕರು ಹುಟ್ಟಿಕೊಳ್ಳುತ್ತಾರೆ ಎಂದರು.

ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾಗಿಲ್ಲಾವೆಂದುಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂಹೇಳಿದ್ದಾರೆ, ಚುನಾವಣೆ ಪೂರ್ವ ಅಥವಾ ಚುನಾವಣೆಬಳಿಕ ಮೈತ್ರಿ ಪಕ್ಷಗಳು ನಿರ್ಣಯ ತೆಗೆದುಕೊಳ್ಳಬಹುದು ಎಂದು ಪವಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.