ADVERTISEMENT

2018ರ ಆಕ್ಷೇಪಾರ್ಹ ಟ್ವೀಟ್ ಪ್ರಕರಣ: ಮೊಹಮ್ಮದ್ ಜುಬೈರ್‌ಗೆ ಜಾಮೀನು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜುಲೈ 2022, 9:11 IST
Last Updated 15 ಜುಲೈ 2022, 9:11 IST
   

ನವದೆಹಲಿ:‘ಫ್ಯಾಕ್ಟ್‌ ಚೆಕ್‌’ ವೆಬ್‌ಸೈಟ್‌ ಆಲ್ಟ್ ನ್ಯೂಸ್‌ನ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್‌ಗೆ 2018ರ ಟ್ವೀಟ್ ಪ್ರಕರಣದಲ್ಲಿ ಪಟಿಯಾಲ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ.

ವೈಯಕ್ತಿಕ ಬಾಂಡ್ ₹50,000 ಆಧಾರದಲ್ಲಿ ಜಾಮೀನು ನೀಡಲಾಗಿದೆ. ಆದರೆ, ನ್ಯಾಯಾಲಯದ ಅನುಮತಿ ಪಡೆಯದೆ ವಿದೇಶಕ್ಕೆ ತೆರಳುವಂತಿಲ್ಲ ಎಂದು ಸೂಚಿಸಿದೆ.

ಹಿಂದೂ ದೇವರ ಕುರಿತು 2018ರಲ್ಲಿ ಮಾಡಿದ್ದ ಆಕ್ಷೇಪಾರ್ಹ ಟ್ವೀಟ್‌ ಪ್ರಕರಣ ಇದಾಗಿದೆ. ಜೂನ್‌ 27ರಂದು ದೆಹಲಿ ಪೊಲೀಸರು ಜುಬೈರ್‌ ಅವರನ್ನು ಬಂಧಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.