
ಎಐ ಚಿತ್ರ
ಡಿಯೋರಿಯಾ(ಉತ್ತರಪ್ರದೇಶ): ಬಾಲಕನೊಬ್ಬನಿಗೆ ಮೂವರು ಯುವಕರು ಮೊಮೊ ಕೊಡಿಸುವ ನೆಪದಲ್ಲಿ ಅವನ ನಂಬಿಕೆ ಗಳಿಸಿದ್ದಾರೆ. ನಂತರ ಅವನಿಂದಲೇ ಮನೆಯಲ್ಲಿದ್ದ ₹85 ಲಕ್ಷ ಮೌಲ್ಯದ ಒಡವೆಗಳನ್ನು ತರಿಸಿಕೊಂಡು, ವಂಚಿಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ,
ಉತ್ತರಪ್ರದೇಶದ ಡಿಯೋರಿಯಾದಲ್ಲಿ ಘಟನೆ ಜರುಗಿದೆ. ಘಟನೆಗೆ ಸಂಬಂಧಿಸಿದಂತೆ ಬಾಲಕನ ತಂದೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಮನೆಯ ಅಲ್ಮಾರಾದಲ್ಲಿ ಒಡವೆಗಳನ್ನು ಇಡಲಾಗಿತ್ತು. ಬಾಲಕನ ಸಹೋದರಿ ತನ್ನ ಆಭರಣಗಳನ್ನು ಕೇಳಿದ್ದಾಳೆ. ಆಗ, ಒಡವೆಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ, 7ನೇ ತರಗತಿ ಓದುತ್ತಿರುವ ಬಾಲಕನು ‘ಮೊಮೊ’ಗಾಗಿ ಒಡವೆಗಳನ್ನು ನೀಡಿದ್ದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮೊಮೊ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಯುವಕರು ಒಡವೆಗಳೊಂದಿಗೆ ಪರಾರಿಯಾಗಿದ್ದಾರೆ. ಅವರನ್ನು ಹುಡುಕುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.