ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಥುನಾಗ್‌ನಲ್ಲಿ ಪ್ರವಾಹಕ್ಕೆ ಸಿಲುಕಿದ್ದ ವಯೋವೃದ್ಧರೊಬ್ಬರನ್ನು ಶುಕ್ರವಾರ ರಕ್ಷಿಸಿದ ರಕ್ಷಣಾ ಕಾರ್ಯಕರ್ತರೊಬ್ಬರು ಸುರಕ್ಷಿತ ಸ್ಥಳಕ್ಕೆ ಕರೆತಂದರು
ಪಿಟಿಐ ಚಿತ್ರ
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಜೂನ್ 20ರಿಂದ ಮುಂಗಾರಿನ ಅಬ್ಬರ ಬಿರುಸುಗೊಂಡಿದೆ. ಮೇಘಸ್ಫೋಟ, ಪ್ರವಾಹ, ಭೂಕುಸಿತದಿಂದ ಇದುವರೆಗೂ 43 ಜನರು ಮೃತಪಟ್ಟಿದ್ದು, 37 ಜನರು ನಾಪತ್ತೆ ಆಗಿದ್ದಾರೆ. ಅಂದಾಜು ₹5 ಸಾವಿರ ಕೋಟಿ ನಷ್ಟವಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಮೇಘಸ್ಫೋಟಕ್ಕೆ 14 ಮಂದಿ ಮೃತಪಟ್ಟಿದ್ದರೆ, ಪ್ರವಾಹದಲ್ಲಿ ಎಂಟು ಮಂದಿ, ಭೂಕುಸಿತದಿಂದ ಒಬ್ಬರು ಹಾಗೂ ನೀರಿನಲ್ಲಿ ಮುಳುಗಿ ಏಳು ಮಂದಿ ಅಸುನೀಗಿದ್ದಾರೆ.
402 ಜನರನ್ನು ರಕ್ಷಿಸಿದ್ದು, ಇವರು ಐದು ಕಾಳಜಿ ಕೇಂದ್ರಗಳಲ್ಲಿ ಆಸರೆ ಪಡೆದಿದ್ದಾರೆ. ಭಾರದ್, ದೇಜಿ, ಪಯಾಲಾ, ರುಕ್ಚುಯಿ ಗ್ರಾಮಗಳಲ್ಲಿ ಸಿಲುಕಿದ್ದ 65 ಜನರನ್ನು ಎನ್‌ಡಿಆರ್‌ಎಫ್ ಶುಕ್ರವಾರ ರಕ್ಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.