ADVERTISEMENT

Monsoon Rains | 9 ದಿನ ಮುನ್ನವೇ ದೇಶ ವ್ಯಾಪಿಸಿದ ಮುಂಗಾರು

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 15:14 IST
Last Updated 29 ಜೂನ್ 2025, 15:14 IST
ಸಂಗ್ರಹ ಚಿತ್ರ 
ಸಂಗ್ರಹ ಚಿತ್ರ    

ನವದೆಹಲಿ: ನಿಗದಿಪಡಿಸಿದ ದಿನಕ್ಕಿಂತ ಒಂಬತ್ತು ದಿನಗಳ ಮುನ್ನವೇ ಮುಂಗಾರು ದೇಶಾದ್ಯಂತ ವ್ಯಾಪಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಮ್‌ಡಿ) ತಿಳಿಸಿದೆ. 2020ರ ಬಳಿಕ ಇದೇ ಮೊದಲ ಬಾರಿಗೆ ಮುಂಗಾರು ಬೇಗ ದೇಶದಾದ್ಯಂತ ಆವರಿಸಿದೆ. 

ದೆಹಲಿಗೆ ಜೂನ್‌ 27ರಂದು ಮುಂಗಾರು ತಲುಪಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಎರಡು ದಿನ ತಡವಾಗಿ ಜೂನ್‌ 29ರ ಭಾನುವಾರ ದೆಹಲಿಗೆ ಮುಂಗಾರು ಪ್ರವೇಶಿಸಿದೆ.  

ಸಾಮಾನ್ಯವಾಗಿ ಮುಂಗಾರು ಜೂನ್‌ 1ರಂದು ಕೇರಳ ಪ್ರವೇಶಿಸಿ, ಜುಲೈ 8ರ ವೇಳೆಗೆ ದೇಶದಾದ್ಯಂತ ವ್ಯಾ‍ಪಿಸುತ್ತದೆ. ಆದರೆ ಈ ಬಾರಿ ಮೇ 24ರಂದೇ ಕೇರಳವನ್ನು ಪ್ರವೇಶಿಸಿತ್ತು. ಮೇ 29ರಿಂದ ಜೂನ್‌ 16ರವರೆಗೆ 18 ದಿನ ಮುಂಗಾರು ನಿಶ್ಚಲವಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.