ADVERTISEMENT

ತಾಯಿಯಾದವಳು ತನ್ನ ಮಕ್ಕಳಿಗೆ ಹೊಡೆಯಲ್ಲ: ಬಾಂಬೆ ಹೈಕೋರ್ಟ್‌

ಪಿಟಿಐ
Published 25 ಫೆಬ್ರುವರಿ 2025, 11:33 IST
Last Updated 25 ಫೆಬ್ರುವರಿ 2025, 11:33 IST
ಬಾಂಬೆ ಹೈಕೋರ್ಟ್‌ 
ಬಾಂಬೆ ಹೈಕೋರ್ಟ್‌    

ಮುಂಬೈ: ತಾಯಿಯಾದವಳು ತನ್ನ ಮಕ್ಕಳಿಗೆ ಹೊಡೆಯಲು ಸಾಧ್ಯವಿಲ್ಲ ಎಂದು ಹೇಳಿರುವ ಬಾಂಬೆ ಹೈಕೋರ್ಟ್‌, ಹಲ್ಲೆ ಪ್ರಕರಣದಲ್ಲಿ 28 ವರ್ಷದ ಮಹಿಳೆಗೆ ಜಾಮೀನು ಮಂಜೂರು ಮಾಡಿದೆ.

ದೂರುದಾರ ತಂದೆ ಮತ್ತು ಆರೋಪಿ ತಾಯಿ ನಡುವಿನ ಜಗಳದಲ್ಲಿ ಮಗು ಬಲಿಪಶುವಾಗಿದೆ ಎಂದು ನ್ಯಾಯಮೂರ್ತಿ ಮಿಲಿಂದ್ ಜಾದವ್ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

ಬಾಲಕನ ವೈದ್ಯಕೀಯ ವರದಿಗಳು ಆತ ಮೂರ್ಛೆರೋಗದಿಂದ ಬಳಲುತ್ತಿರುವುದು ತೋರಿಸುತ್ತಿದೆ. ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದಲೂ ಬಳಲುತ್ತಿದ್ದಾನೆ. ಮಗುವಿನ ಆರೈಕೆಗೆ ಆರೋಪಿ ತಾಯಿ ಹೆಣಗಾಡುತ್ತಿರುವುದು ಇದರಿಂದ ತಿಳಿಯುತ್ತದೆ ಎಂದು ಪೀಠ ಹೇಳಿದೆ.

ADVERTISEMENT

ವಿಚ್ಛೇದಿತ ಪತ್ನಿ ಮತ್ತು ಆಕೆಯ ಸಂಗಾತಿ ನನ್ನ ಮಗನಿಗೆ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದು, ಒಂದು ಬಾರಿ ಕೊಲ್ಲಲ್ಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಮಗುವಿನ ಜೈವಿಕ ತಂದೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು 2023 ಮಾರ್ಚ್‌ನಲ್ಲಿ ಮಹಿಳೆಯನ್ನು ಬಂಧಿಸಿದ್ದರು.

ಮೇಲ್ನೋಟಕ್ಕೆ ಆರೋಪಗಳನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿರುವ ಕೋರ್ಟ್, 15 ಸಾವಿರ ವೈಯಕ್ತಿಕ ಬಾಂಡ್‌ ಮೇಲೆ ಮಹಿಳೆಗೆ ಜಾಮೀನು ಮಂಜೂರು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.