ADVERTISEMENT

ಮಧ್ಯಪ್ರದೇಶ: ‘ಮಹಿಳಾ ಕೇಂದ್ರಿತ’ ಬಜೆಟ್‌ ಮಂಡನೆ

ಪಿಟಿಐ
Published 18 ಫೆಬ್ರುವರಿ 2026, 16:16 IST
Last Updated 18 ಫೆಬ್ರುವರಿ 2026, 16:16 IST
Bhopal: Madhya Pradesh Finance Minister Jagdish Devda briefs the media before presenting the state Budget for 2026-27 in the state Assembly, in Bhopal, Wednesday, Feb. 18, 2026. (PTI Photo) (PTI02_18_2026_000278A)
Bhopal: Madhya Pradesh Finance Minister Jagdish Devda briefs the media before presenting the state Budget for 2026-27 in the state Assembly, in Bhopal, Wednesday, Feb. 18, 2026. (PTI Photo) (PTI02_18_2026_000278A)   

ಭೋಪಾಲ್‌: ಮಹಿಳಾ ಸಬಲೀಕರಣ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗಾಗಿ ₹1.27 ಲಕ್ಷ ಕೋಟಿ ಮೀಸಲಿಟ್ಟಿರುವ, ಹೊಸ ತೆರಿಗೆ ಹೊರೆ ಇಲ್ಲದ ಒಟ್ಟು ₹4.38 ಲಕ್ಷ ಕೋಟಿ ವೆಚ್ಚದ 2026–27ನೇ ಸಾಲಿನ ಬಜೆಟ್‌ ಅನ್ನು ಬುಧವಾರ ಮಧ್ಯಪ್ರದೇಶದ ಹಣಕಾಸು ಸಚಿವ ಜಗದೀಶ್‌ ದೇವ್ಡಾ ಮಂಡಿಸಿದರು. 

‘ರಾಜ್ಯದ ಜನರ ಮೇಲೆ  ಸಾಲದ ಹೊರೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ’ ಎಂದು ವಿರೋಧ ಪಕ್ಷದ ಮುಖಂಡರು ಬಜೆಟ್‌ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಒಟ್ಟಾರೆ ಬಜೆಟ್‌ ಅನ್ನು ‘ಜ್ಞಾನಿ’ (ಜಿವೈಎಎನ್‌ಐಐ) ಮಾದರಿಯಲ್ಲಿ ಸಿದ್ಧಪಡಿಸಲಾಗಿದೆ. ಜಿ–ಗರೀಬ್‌ ಕಲ್ಯಾಣ್‌, ವೈ–ಯುವ ಶಕ್ತಿ, ಎ–ಅನ್ನದಾತ, ಎನ್‌–ನಾರಿಶಕ್ತಿ ಮತ್ತು ಐಐ– ಇಂಡಸ್ಟ್ರಿ ಮತ್ತು ಇನ್‌ಫ್ರಾಸ್ಟ್ರಕ್ಚರ್ ಕ್ಷೇತ್ರಗಳಿಗೆ ಆದ್ಯತೆ ನೀಡಿ, ಪ್ರತಿ ಕ್ಷೇತ್ರಕ್ಕೂ ₹3 ಲಕ್ಷ ಕೋಟಿ ಅನುದಾನ ಮೀಸಲಿಡಲಾಗಿದೆ. 

ADVERTISEMENT

ಒಟ್ಟು 15 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಟೆಟ್ರಾ ಪ್ಯಾಕ್‌ಗಳಲ್ಲಿ ಹಾಲು ವಿತರಿಸಲಾಗುವುದು, ನಗರದಲ್ಲಿ ಕೆಲಸ ಮಾಡುವ ಮಹಿಳೆಯರಿಗಾಗಿ 5,700 ವಸತಿನಿಲಯಗಳನ್ನು ಪ್ರಾರಂಭಿಸಲಾಗುವುದು ಎಂದು ದೇವ್ಡಾ ಬಜೆಟ್‌ ಭಾಷಣದಲ್ಲಿ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.