ADVERTISEMENT

ಮಧ್ಯಪ್ರದೇಶ ಕಟ್ಟಡಕ್ಕೆ ಬೆಂಕಿ: ಆರೋಪಿ ಬಂಧನ

ಪಿಟಿಐ
Published 8 ಮೇ 2022, 13:46 IST
Last Updated 8 ಮೇ 2022, 13:46 IST
ಮಧ್ಯಪ್ರದೇಶದ ಇಂದೋರ್‌ನಲ್ಲಿನ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ಕಾರು, ಬೈಕ್‌ಗಳು ಸುಟ್ಟು ಕರಕಲಾದವು ಪಿಟಿಐ ಚಿತ್ರ
ಮಧ್ಯಪ್ರದೇಶದ ಇಂದೋರ್‌ನಲ್ಲಿನ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ಕಾರು, ಬೈಕ್‌ಗಳು ಸುಟ್ಟು ಕರಕಲಾದವು ಪಿಟಿಐ ಚಿತ್ರ   

ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಶನಿವಾರ 7 ಜನರ ಸಾವು ಮತ್ತು 9 ಮಂದಿ ಗಾಯಗೊಂಡ 3ನೇ ಅಂತಸ್ತಿನ ಕಟ್ಟಡದ ಬೆಂಕಿ ಅವಘಡಕ್ಕೆ ಕಾರಣವಾದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಟ್ಟಡಕ್ಕೆ ಬೆಂಕಿ ಹೊತ್ತಿಕೊಳ್ಳಲು ಕಾರಣನಾದ ಆರೋಪಿ ಶುಭಂ ಅಲಿಯಾಸ್ ಸಂಜಯ್ ದೀಕ್ಷಿತ್(27) ಪೊಲೀಸರನ್ನು ಕಂಡೊಡನೆ ಓಡಲು ಆರಂಭಿಸಿದ್ದ. ಈ ವೇಳೆ ಬಿದ್ದು ಗಾಯಗೊಂಡ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಆಗಿದ್ದೇನು?:ಉತ್ತರ ಪ್ರದೇಶದ ಝಾನ್ಸಿ ಮೂಲದವನಾದ ಆರೋಪಿ ಸಂಜಯ್ ದೀಕ್ಷಿತ್, ಕಳೆದೆರಡು ತಿಂಗಳ ಹಿಂದಿನಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇದೇ ಕಟ್ಟಡದಲ್ಲಿ ವಾಸವಿದ್ದ ಮಹಿಳೆಯೊಬ್ಬರನ್ನು ಪ್ರೀತಿಸುತ್ತಿದ್ದ. ಆದರೆ, ಆಕೆ ಮದುವೆಗೆ ನಿರಾಕರಿಸಿದ್ದಕ್ಕೆ ಆರೋಪಿ ದೀಕ್ಷಿತ್, ಕಟ್ಟಡದ ವಾಹನಗಳ ಪಾರ್ಕಿಂಗ್‌ನಲ್ಲಿ ನಿಂತಿದ್ದ ಆಕೆಯ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ್ದ. ಇದೇ ಬೆಂಕಿ ಇಡೀ ಕಟ್ಟಡಕ್ಕೆ ಆವರಿಸಿ, 7 ಮಂದಿ ಅಮಾಯಕರ ಸಾವಿಗೆ ಕಾರಣವಾಗಿತ್ತು.

ADVERTISEMENT

ಮೊದಲಿಗೆ ಈ ಘಟನೆ ಶಾರ್ಟ್ ಸರ್ಕಿಟ್‌ನಿಂದ ಸಂಭವಿಸಿದ ಘಟನೆ ಎಂದೇ ಭಾವಿಸಲಾಗಿತ್ತು. ಆದರೆ ಸಿಸಿಟಿ ಕ್ಯಾಮೆರಾಗಳಿಂದ ಆರೋಪಿಯ ಕೃತ್ಯ ಬಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.