ADVERTISEMENT

ಮಧ್ಯಪ್ರದೇಶ: ಧಾರ್ಮಿಕ ಸ್ವಾತಂತ್ರ್ಯ ಮಸೂದೆ–2020ಕ್ಕೆ ಅನುಮೋದನೆ

ಪಿಟಿಐ
Published 26 ಡಿಸೆಂಬರ್ 2020, 8:27 IST
Last Updated 26 ಡಿಸೆಂಬರ್ 2020, 8:27 IST
ಶಿವರಾಜ್‌ ಸಿಂಗ್‌ ಚೌಹಾಣ್‌
ಶಿವರಾಜ್‌ ಸಿಂಗ್‌ ಚೌಹಾಣ್‌   

ಭೋಪಾಲ್‌: ಮದುವೆಯಾಗುವ ಮೂಲಕ ಅಥವಾ ವಂಚಿಸಿ ಮತಾಂತರಕ್ಕೆ ಯತ್ನಿಸುವುದನ್ನು ತಡೆಯಲು ರೂಪಿಸಿರುವ ಧಾರ್ಮಿಕ ಸ್ವಾತಂತ್ರ್ಯ ಮಸೂದೆ–2020ಕ್ಕೆ ಮಧ್ಯಪ್ರದೇಶ ಸಚಿವ ಸಂಪುಟ ಶನಿವಾರ ಅನುಮೋದನೆ ನೀಡಿದೆ.

ಈ ಮಸೂದೆ ಕಾಯ್ದೆ ರೂಪದಲ್ಲಿ ಜಾರಿಯಾದರೆ, ಅಪರಾಧಿಗೆ 10 ವರ್ಷ ಜೈಲು ಹಾಗೂ ₹ 1ಲಕ್ಷ ದಂಡ ವಿಧಿಸಬಹುದಾಗಿದೆ.

‘ಈ ಮಸೂದೆಯನ್ನು ಶೀಘ್ರವೇ ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಕಾನೂನು ರೂಪಪ‍ಡೆದು ಜಾರಿಗೊಂಡ ನಂತರ, ಮದುವೆಯಾಗಿ ಅಥವಾ ವಂಚಿಸಿ ಇಲ್ಲವೇ ಬೆದರಿಕೆವೊಡ್ಡುವ ಮೂಲಕ ಮತಾಂತರಗೊಳಿಸುವುದರ ವಿರುದ್ಧ ದೇಶದಲ್ಲಿಯೇ ಅತ್ಯಂತ ಕಠಿಣ ಕಾನೂನು ಇದಾಗಲಿದೆ‘ ಎಂದು ಗೃಹ ಸಚಿವ ನರೋತ್ತಮ್‌ ಮಿಶ್ರಾ ತಿಳಿಸಿದರು.

ADVERTISEMENT

‘ಕೇವಲ ಮತಾಂತರ ಉದ್ದೇಶದಿಂದ ಆಗುವ ಮದುವೆ ಅಸಿಂಧು ಎಂಬುದಾಗಿ ಘೋಷಿಸಲು ಈ ಉದ್ದೇಶಿತ ಕಾನೂನಿನಲ್ಲಿ ಅವಕಾಶ ಇದೆ. ಮತಾಂತರಗೊಳ್ಳಲು ಇಚ್ಛಿಸುವವರು, ಎರಡು ತಿಂಗಳು ಮುಂಚಿತವಾಗಿ ಜಿಲ್ಲಾ ಆಡಳಿತಕ್ಕೆ ಅರ್ಜಿ ಸಲ್ಲಿಸಲು ಈ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗುತ್ತದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.