ADVERTISEMENT

24 ಗಂಟೆ ಶಾಸ್ತ್ರೀಯ ನೃತ್ಯ: ಗಿನ್ನಿಸ್‌ ದಾಖಲೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 14:31 IST
Last Updated 21 ಫೆಬ್ರುವರಿ 2025, 14:31 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಛತರ್‌ಪುರ: ಮಧ್ಯಪ್ರದೇಶದಲ್ಲಿ ನಡೆದ 51ನೇ ಖಜುರಾಹೊ ನೃತ್ಯೋತ್ಸವದಲ್ಲಿ 139 ಕಲಾವಿದರು 24 ಗಂಟೆಗಳ ಕಾಲ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿ ಗಿನ್ನಿಸ್‌ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದು ಸುದೀರ್ಘ ಅವಧಿಯ ಶಾಸ್ತ್ರೀಯ ನೃತ್ಯ ಎಂಬ ದಾಖಲೆ ಬರೆದಿದೆ. 

ಕಲಾವಿದರು, ಬುಧವಾರ ಮಧ್ಯಾಹ್ನ 2.34ರಿಂದ ಗುರುವಾರ ಮಧ್ಯಾಹ್ನ 2.43ರವರೆಗೆ ನಿರಂತರವಾಗಿ 24 ಗಂಟೆ, 9 ನಿಮಿಷ, 6 ಸೆಕೆಂಡ್‌ ನೃತ್ಯ ಮಾಡಿದ್ದಾರೆ. 

ನೃತ್ಯ ಪ್ರದರ್ಶನದ ಬಳಿಕ ಗಿನ್ನಿಸ್‌ ತಂಡವು ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರಿಗೆ ಪ್ರಮಾಣಪತ್ರ ನೀಡಿತು. 

ADVERTISEMENT

ರಾಜ್ಯದ ಸಾಂಸ್ಕೃತಿಕ ಇಲಾಖೆಯು ಕಾರ್ಯಕ್ರಮ ಆಯೋಜಿಸಿತ್ತು. ಕಥಕ್‌, ಭರತನಾಟ್ಯ, ಕುಚಿಪುಡಿ, ಮೋಹಿನಿಅಟ್ಟಂ ಹಾಗೂ ಒಡಿಸ್ಸಿ ಶಾಸ್ತ್ರೀಯ ನೃತ್ಯ ‍ಪ್ರದರ್ಶಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.