ADVERTISEMENT

ಶಿಕ್ಷೆ ಪೂರ್ಣಗೊಂಡ ವರ್ಷದ ಬಳಿಕ ಪಾಕಿಸ್ತಾನಿ ಗೂಢಚಾರಿ ತನ್ನ ದೇಶಕ್ಕೆ ವಾಪಾಸು

ಪಿಟಿಐ
Published 28 ಆಗಸ್ಟ್ 2021, 10:07 IST
Last Updated 28 ಆಗಸ್ಟ್ 2021, 10:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗ್ವಾಲಿಯರ್: ‘ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ 15 ವರ್ಷಗಳ ಹಿಂದೆ ಗೂಢಚರ್ಯೆ ಪ್ರಕರಣದಡಿ ಬಂಧನಕ್ಕೆ ಒಳಗಾಗಿದ್ದ ಪಾಕಿಸ್ತಾನಿ ಪ್ರಜೆಯನ್ನು ಜೈಲು ಶಿಕ್ಷೆ ಪೂರೈಸಿದ ವರ್ಷದ ಬಳಿಕ ಪಾಕಿಸ್ತಾನಕ್ಕೆ ವಾಪಾಸು ಕಳುಹಿಸಲಾಗುತ್ತಿದೆ. ಕೊರೊನಾ ಪಿಡುಗಿನಿಂದಾಗಿ ಹಸ್ತಾಂತರ ಪ್ರಕ್ರಿಯೆಯಲ್ಲಿ ವಿಳಂಬ ಉಂಟಾಯಿತು’ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.

‘ಪಾಕಿಸ್ತಾನಿ ಗೂಢಚಾರಿ ಅಬ್ಬಾಸ್‌ ಆಲಿಯನ್ನು ಪೊಲೀಸ್‌ ಭಧ್ರತೆಯೊಂದಿಗೆ ಗುರುವಾರ ವಾಘಾ ಗಡಿಗೆ ಕಳುಹಿಸಲಾಗಿದೆ. ಅಲ್ಲಿ ಆತನನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಗುವುದು’ ಎಂದು ಗ್ವಾಲಿಯರ್ ಕೇಂದ್ರ ಕಾರಾಗೃಹದ ಮನೋಜ್ ಕುಮಾರ್ ಸಾಹು ಹೇಳಿದರು.

2006ರ ಮಾರ್ಚ್‌ನಲ್ಲಿ ಆಕ್ಷೇಪಾರ್ಹ ದಾಖಲೆಗಳೊಂದಿಗೆ ಅಬ್ಬಾಸ್‌ ಆಲಿಯನ್ನು ನಾಯ್‌ ಸಡಕ್‌ನಲ್ಲಿ ಬಂಧಿಸಲಾಗಿತ್ತು. ನ್ಯಾಯಾಲಯವು ಆತನಿಗೆ 14 ವರ್ಷದ ಜೈಲು ಶಿಕ್ಷೆ ವಿಧಿಸಿತ್ತು. ಈ ಅವಧಿಯು ಕಳೆದ ವರ್ಷ ಮಾರ್ಚ್‌ 26ರಂದು ಮುಕ್ತಾಯವಾಗಿತ್ತು. ಆದರೆ ಕೊರೊನಾದಿಂದಾಗಿ ಆತನನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲು ಸಾಧ್ಯವಾಗಿಲ್ಲ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.